ಬಂಟ್ವಾಳ: ಸಜೀಪ ಮೂಡ ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನವು 1 ಕೋಟಿ ರೂ. ವೆಚ್ಚದಲ್ಲಿ ಜೀರ್ಣೊದ್ಧಾರ ಅಂಗವಾಗಿ ಪುನರ್‍ನಿರ್ಮಾಣಗೊಳ್ಳುತ್ತಿದ್ದು, ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೆಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು. ಸರಕಾರದಿಂದ ಗರಿಷ್ಠ ಸಹಾಯಧನ ಹಾಗೂ ಸಂಪರ್ಕಹ ರಸ್ತೆಗೆ ಡಾಮರೀಕರಣಗೊಳಿಸುವ ಭರವಸೆ ನೀಡಿದರು.

IMG_20150916_151946
ಈ ಸಂದರ್ಭ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜೀರ್ಣೋದ್ದಾರ ಅಮಿತಿ ಅಧ್ಯಕ್ಷ ಬಿ.ಸದಾನಂದ ಪೂಂಜಾ, ಮಾಜಿ ಗ್ರಾ.ಪಂ. ಅಧ್ಯಕ್ಷ ಶೋಭಿತ್ ಪೂಂಜಾ, ಸಮಿತಿ ಪದಾಧಿಕಾರಿಗಳಾದ ಎಂ. ಸುಬ್ರಹ್ಮಣ್ಯ ಭಟ್, ಕೆ.ಸದಾನಂದ ಶೆಟ್ಟಿ,ಜಯಶಂಕರ, ಮಾರಪ್ಪ ಕೊಟ್ಟಾರಿ, ಶ್ರೀನಾಥ ಶೆಟ್ಟಿ, ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *