ಮೂಡುಬಿದಿರೆ: ಹಿಂದೂಗಳ ಭಾವನೆಯನ್ನು ಕೆರಳಿಸುವ ರೀತಿಯಲ್ಲಿ ಕಾನೂನು ಬಾಹಿರ ಹೇಳಿಕೆ ನೀಡಿರುವ ಪ್ರೊ. ಕೆ. ಎಸ್. ಭಗವಾನ್ ಅವರ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದರೆಗುಡ್ಡೆಯ ಪೆಲತ್ತಡಿ ಮನೆಯ ಸಮಿತ್‍ರಾಜ್ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ಭಗವಾನ್, ಸೆಲ್ಲಿ, ಮತ್ತು ಚಂಪಾ ಸೇರಿದಂತೆ ಪ್ರಗತಿಪರರ ತಂಡದ ಹೇಳಿಕೆಗಳು ಪತ್ರಿಕೆಯಲ್ಲಿ ಮತ್ತು ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಹಿಂದೂ ಧರ್ಮ ಗ್ರಂಥಗಳು, ಶ್ರೀರಾಮ, ದೇವಾಲಯಗಳ ಬಗ್ಗೆ ಹೇಳಿರುವ ಮಾತುಗಳಿಂದ ಹಿಂದೂಗಳಿಗೆ ತೀವ್ರ ಅವಮಾನವಾಗಿದೆ. ಮನಸ್ಸಿಗೆ ಆಘಾತ ನೀಡಿರುವ ತೀರ ಕೆಳ ಮಟ್ಟದ ಹೇಳಿಕೆಗಳು ಕಾನೂನು ಬಾಹಿರವಾಗಿವೆ ಎಂದವರು ಆರೋಪಿಸಿದ್ದಾರೆ.
