ಬಂಟ್ವಾಳ: ಗಾಯತ್ರಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಮೆಲ್ಕಾರ್ ಕೇಂದ್ರ ಕಛೇರಿ ಹಾಗೂ ಮಂಗಳಪದವು ಶಾಖಾ ಕಛೇರಿ ಹೊಂದಿರುವ ಹತ್ತು ಕೋಟಿ ಎಪ್ಪತ್ತೊಂಭತ್ತು ಲಕ್ಷ ಹನ್ನೆರಡು ಸಾವಿರ ಅಧಿಕ ವ್ಯವಹಾರ ನಡೆಸಿ ಸತತ ಪ್ರಗತಿಯನ್ನು ದಾಖಲಿಸಿ ಕ್ರೆಡಿಟ್ ಸೊಸೈಟಿಗಳ ಸಾಲಿನಲ್ಲಿ ‘ಸಿ’ ಯಿಂದ ‘ಬಿ’ ಗ್ರೇಡ್ ಗೆ ಅಭಿವೃದ್ಧಿ ಸಾಧಿಸಿದೆ ಎಂದು ಅಧ್ಯಕ್ಷ ವಿಷ್ಣು ಭಟ್ ಅಡ್ವೇಯಿ ತಿಳಿಸಿದ್ದಾರೆ.
ಅವರು ಮೆಲ್ಕಾರ್ ರಾಮ್ ದೇವ್ ಕಲ್ಯಾಣ ಮಂಟಪದಲ್ಲಿ ನಡೆದ ಸೊಸೈಟಿಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಬ್ಯಾಂಕಿನ 2014-15ನೇ ವರ್ಷದ ಸಾಲಿನ ಪ್ರಗತಿಯ ವರದಿ ಮಂಡಿಸಿದರು.
KAR_9871

KAR_9881
ಸಂಸ್ಥೆಯು ಇನ್ನೂ ಸುಧೃಡವಾಗಿ ಬೆಳೆಯಬೇಕಾದ ಸಂದರ್ಭದಲ್ಲಿ ಸಂಸ್ಥೆಯ ಪಾಲು ಬಂಡವಾಳ ಹಾಗು ಠೇವಣಾತಿಯನ್ನು ಹೆಚ್ಚಿಸಬೇಕಾಗಿದ್ದು , ಆರ್ಥಿಕ ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾಪಿಸಿದಂತೆ ಪುತ್ತೂರು ನಗರದಲ್ಲಿ ಎಲ್ಲಾ ವ್ಯಾವಹಾರಿಕ ಅನುಕೂಲ ತೆಗ ಳೊಂದಿಗೆ ಇರುವ ಸಂಸ್ಥೆಯ ನೂತನ ಶಾಖೆಯನ್ನು ತೆರೆಯುವ ಬಗ್ಗೆ ನಿಶ್ಚಯಿಸಲಾಗಿದೆ. ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ 600ಚದರ ಅಡಿ ಸ್ಥಳವನ್ನು ಈಗಾಗಲೇ ನಿಗದಿಪಡಿಸಲಾಗಿದೆ . ಪ್ರಸ್ತಾವಿತ ಶಾಖೆಯು ಮುಂದಿನ ಕೆಲವೇ ತಿಂಗ ಳುಗಳಲ್ಲಿ ಆರಂಭ ಗೊಳ್ಳಲಿದೆ ಎಂದು ಅವರು ವಿವರಿಸಿದರು. ಇದೇ ಸಂದರ್ಭದಲ್ಲಿ ಅವರು ಸದಸ್ಯರಿಗೆ 15ಶೇಕಡಾ ಡಿವಿಡೆಂಟ್ ಘೋಷಣೆ ಮಾಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಶಾರದಾ ಎಸ್.ರಾವ್ , ನಿರ್ದೇಶಕರುಗಳಾದ ಪರಮೇಶ್ವರ ಐತಾಳ್ ಕಂದೂರು , ಟಿ.ಜಿ.ರಾಜಾರಾಮ ಭಟ್, ಕೈಯೂರು ನಾರಾಯಣ ಭಟ್ , ಲಕ್ಷ್ಮೀ ನಾರಾಯಣ ಉಡುಪ , ಜಯಶಂಕರ್ ಬ್ರಾಸಿತ್ತಾಯ , ಪ್ರಭಾಕರ ರಾವ್ ಕೆ.ಶಂಭೂರು , ಸೂರ್ಯನಾರಾಯಣ ಪೂವಳ ,ಮೋಹನ ಆಚಾರ್ಯ , ರಾಜಾರಾಮ ಐತಾಳ್ ಕಂದೂರು , ವಿಶಾಲಾಕ್ಷಿ ಉಪಸ್ಥಿತರಿದ್ದರು.

ಸಭೆಯಲ್ಲಿ ಸಾಂದೀಪನಿ ವಿಷ್ಣು ಭಟ್, ಮಿತ್ತೋಟ ವೆಂಕಟ್ರಮಣ ಭಟ್ , ಅನಂತಪದ್ಮನಾಭ ಮಯ್ಯ , ನಿರ್ಕಜೆ ಅನಂತ ಭಟ್ , ಮಜಿ ರಾಮ ಭಟ್ , ಮಾದಕಟ್ಟೆ ಗೋಪಾಲಕೃಷ್ಣ ಭಟ್, ಅರ್ಬಿ ನಾರಾಯಣ ಸೋಮಯಾಜಿ , ಡಾ.ರಾಮಚಂದ್ರ ಶಾಸ್ತ್ರಿ , ಬಾಲಕೃಷ್ಣ ಹೊಳ್ಳ ಶಂಭೂರು, ಏಲಬೆ ಪದ್ಮನಾಭ ಮಯ್ಯ ಬ್ಯಾಂಕಿನ ಪ್ರಗತಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜೇಶ್ವರಿ ಕೆ.ವಾರ್ಷಿಕ ವರದಿ , ಲೆಕ್ಕ ಪರಿಶೋಧನ ವರದಿ ಮಂಡಿಸಿದರು. ನೇತ್ರಾವತಿ ನದಿ ತಿರುವು ಎತ್ತಿನಹೊಳೆ ಯೋಜನೆ ವಿರೋಧಿಸುವ ನಿರ್ಣಯ ಕೈಗೊಳ್ಳಲಾಯಿತು. ಪಾಕ ಪ್ರವೀಣ ಓಣಿಬೈಲು ಶಂಕರನಾರಾಯಣ ಐತಾಳ್ ರವರನ್ನು ಸನ್ಮಾನಿಸಲಾಯಿತು.
ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಡಳಿತ ಮಂಡಳಿ ಹಾಗೂ ಎಸ್.ಆರ್.ಎಸ್.ಚ್ಯಾರಿಟೇಬಲ್ ಟ್ರಸ್ಟ್ ಇವರ ಪ್ರಯೋಜಕತ್ವದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ವಿರೋಚನ ಕಾಳಗ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ಜರಗಿತು.

By suddi9

Leave a Reply

Your email address will not be published. Required fields are marked *