ಮೂಡಬಿದರೆ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಮಾಜಮಂದಿರದಲ್ಲಿ ನಡೆದ, 52ನೇ ವರ್ಷದ ಮೂಡಬಿದಿರೆ ಶ್ರೀ ಗಣೇಶೋತ್ಸವ ಸೋಮವಾರ ಸಂಪನ್ನಗೊಂಡಿತು.
ಮೂಡುಬಿದರೆ ನ್ಯಾಯಾಲಯದ ನ್ಯಾಯಾದೀಶ ಸತೀಶ್ ಎಸ್.ಟಿ. ಹಾಗೂ ಪುರಸಭಾಧ್ಯಕ್ಷೆ ರೂಪಾ ಎಸ್. ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಿದರು.
ಸಮ್ಮಾನ: ರೆ.ಮೊ.ಎಡ್ವಿನ್ ಸಿ. ಪಿಂಟೋ ಮತ್ತು ರಥಶಿಲ್ಪಿ ಅಶ್ವತ್ಥಪುರ ಬಾಬುರಾಯ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.

mbd_sep22_1 (1)
ಮೂಲ್ಕಿ ಮೂಲದ ಡಾ. ಚಂದ್ರಶೇಖರ ಸ್ವಾಮೀಜಿ ಅವರು ಸ್ವಯಂಸ್ಪೂರ್ತಿಯಿಂದ ಇಲ್ಲಿನ ಅನ್ನದಾನಕ್ಕೆ ರೂ. 5 ಲಕ್ಷ ದ ಕೊಡುಗೆ, ಪ್ರಸ್ತಾವಿತ ಗಣೇಶ ಮಂದಿರ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಸಭಾಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ , ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಘೋಷಿಸಿದರು.
ಉಪಾಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ಸಂಚಾಲಕ ರಾಜಾರಾಮ ನಾಗರಕಟ್ಟೆ ಪ್ರಸ್ತಾವನೆ, ನಿರೂಪಣೆಗೈದರು. ಪ್ರ. ಕಾರ್ಯದರ್ಶಿ ನಾರಾಯಣ ಪಿ. ಎಂ., ಕೆ. ಶ್ರೀಪತಿ ಭಟ್ ಉಪಸ್ಥಿತರಿದ್ದರು. ಲಕ್ಷ್ಮಣ ಪೂಜಾರಿ, ಧನಂಜಯ ಮೂಡಬಿದಿರೆ ಸಮ್ಮಾನ ಪತ್ರ ವಾಚಿಸಿದರು. ಪ್ರಫುಲ್ಲಾ ಎಂ. ಶೆಟ್ಟಿ, ಪುರುಷೋತ್ತಮ ರಾವ್, ಗೋಪಾಲ್ ಎಂ. ವಿವಿಧ ಸ್ಪರ್ಧೆಗಳ ಫಲಿತಾಂಶ ಘೋಷಿಸಿದರು. ಚೇತನ್‍ಕುಮಾರ್ ಶೆಟ್ಟಿ ವಂದಿಸಿದರು.

By suddi9

Leave a Reply

Your email address will not be published. Required fields are marked *