ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪುತ್ತೂರು, ಮಂಗಳೂರು, ಉಡುಪಿ, ಜಿಲ್ಲೆಗಳಲ್ಲಿ ಇರುವ ಸಮಗ್ರ ಶಿಶುಮಂದಿರಗಳ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು. 39 ಶಿಶುಮಂದಿರಗಳಿಂದ 110 ಜನ ಆಡಳಿತ ಮಂಡಳಿ ಸದಸ್ಯರು ಹಾಗೂ ಮಾತಾಜಿ ಭಾಗವಹಿಸಿದ್ದರು. ಬೆಳಗ್ಗೆ ಶಿಶುಮಂದಿರದ ಮಕ್ಕಳು ಪ್ರಾರ್ಥನೆ ಮಾಡುವ ವಿಧಾನದಿಂದ ಆರಂಭಗೊಂಡಿತ್ತು. ಶ್ರೀ ಸುರೇಶ್ ಜಿ. ಹಿಂದುಸೇವಾ ಪ್ರತಿಷ್ಠಾನ ನಿರ್ದೇಶಕರು ಮಾತನಾಡಿ ಶಿಶುಮಂದಿರದಿಂದ ಸಾಮಾಜಿಕ ಪರಿವರ್ತನೆಯ ಚಟುವಟಿಕೆಗಳು ನಡೆಯುವುದೆಂದು ತಿಳಿಸುತ್ತಾ ಶಿಶುಮಂದಿರಗಳನ್ನು ಪ್ರಾರಂಭಿಸಲು ಕಾರಣ, ಉದ್ದೇಶ, ಮಹತ್ವವನ್ನು ವಿವರಿಸಿದರು.

ಮಗುವನ್ನು ಅರ್ಥೈಸುವಿಕೆ, ಮಗುವಿನ ಸ್ವಭಾವ ಹಂತಗಳು, ಚಟುವಟಿಕೆ ಮಾಡುವ ವಿಧಾನ, ಸಲಕರಣೆಗಳ ಬಗ್ಗೆ ಎರಡು ಗುಂಪಿನಲ್ಲಿ ಭ|| ಗಂಗಾ, ಭ|| ದಿವ್ಯಾ, ಭ|| ಚಿತ್ರಾ ಚಟುವಟಿಕೆಗಳನ್ನು ಮಾಡಿ ವಿವರಿಸಿದರು.
ಮಾತಾಜಿಗಳೊಂದಿಗೆ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹಾಗೂ ಆಡಳಿತ ಮಂಡಳಿಯವರೊಂದಿಗೆ ಡಾ|| ಪ್ರಭಾಕರಭಟ್ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಸಮಾರೋಪದಲ್ಲಿ ಶ್ರೀಯುತ ಡಾ|| ಪ್ರಭಾಕರ ಭಟ್ ಇವರು ಮಾತನಾಡುತ್ತಾ ಸಂಸ್ಕøತಿ, ಸಂಸ್ಕಾರ ಕೊಡುವ ಉದ್ದೇಶಗಳಿಂದ ಶಿಶುಮಂದಿರಗಳನ್ನು ಪ್ರಾರಂಭಿಸಿದ್ದೇವೆ. ಅದಕ್ಕೆ ಬದ್ಧರಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಕೊಡುವಂತೆ ಅನೇಕ ಉದಾಹರಣೆಗಳೊಂದಿಗೆ ಮಾರ್ಗದರ್ಶನ ಮಾಡಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಿ, ಶ್ರೀಮತಿ ಸುಧಾ ಭಟ್ ಸ್ವಾಗತಿಸಿ, ಶ್ರೀಮತಿ ಸಂಗೀತಾ ವಂದನಾರ್ಪಣೆ ಮಾಡಿದರು.
