ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್ ಇದರ ಯುವ ವಿಭಾಗವು ಮುಂಬಯಿ ಹಾಗೂ ಉಪನಗರಗಳಲ್ಲಿನ ಶಾಲೆಗಳಿಗಾಗಿ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ `ಯುಫೆರಿಯಾ’ವನ್ನು ಕಳೆದ ರವಿವಾರ ಬಿಎಸ್‍ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ಗಳ ಸಂಚಾಲಕತ್ವದನವಿ ಮುಂಬಯಿ ನೆರೂಳ್ ಅಲ್ಲಿನ `ಆಶ್ರಯ’ ಹಿರಿಯರ ನಾಗರಿಕರ ಆಶ್ರಯಧಾಮ `ಆಶ್ರಯ’ ಕೇಂದ್ರದಲ್ಲಿ ಆಯೋಜಿಸಿತ್ತು. ಪೂರ್ವಾಹ್ನ ಸಂಘದ ಅಧ್ಯಕ್ಷಡಾ| ಸುರೇಶ್‍ಎಸ್.ರಾವ್‍ಕಟೀಲುಹಾಗೂಉಭಯ ಸಂಸ್ಥೆಗಳ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಂಗೀತ, ಕ್ವಿಜ್, ಸೃಜನಶೀಲ ಲೇಖನ, ಭಾಷಣ, ಜಾನಪದ ನೃತ್ಯ ಮುಂತಾದ ಸ್ಪರ್ಧೆಗಳೊಂದಿಗೆ `ಯುಫೇರಿಯಾ’ ಏರ್ಪಡಿಸಲ್ಪಟ್ಟಿತು.
BSKB Association Yuphoria-1

BSKB Association Yuphoria-2

BSKB Association Yuphoria-3

BSKB Association Yuphoria-4

ಸುಮಾರು ಹತ್ತು ಶಾಲೆಗಳು ಭಾಗವಹಿಸಿದ್ದ ಈ ಸ್ಪರ್ಧೆಗಳಲ್ಲಿ ಸಂಗೀತದಲ್ಲಿ ಶ್ರೀಜಿತ್ ನಾಯರ್ ಮತ್ತು ನಯನಾ ಘಡೆ (ಎಸ್‍ಬಿಒಎ ಪಬ್ಲಿಕ್ ಸ್ಕೂಲ್ ನೆರೂಳ್), ಪ್ರಥಮ ಹಾಗೂ ತೃತೀಯ, ಅನುಜಾ ಪಾಂಚಾಲ್ (ಉದಯಾಂಚಲ್ ಹೈಸ್ಕೂಲ್, ವಿಕ್ರೋಲಿ) ದ್ವಿತೀಯ ಭಾಷಣ ಸ್ಪರ್ಧೆಯಲ್ಲಿನೇಹಾ ಘೊಲಪ್ (ಎಸ್‍ಬಿಒಎ ಪಬ್ಲಿಕ್ ಸ್ಕೂಲ್, ನೆರೂಳ್), ಉದಿತಿ ಮಾಲವೀಯ, (ಡಾನ್ ಬಾಸ್ಕೊನೆರೂಳ್) ಮತ್ತು ಸಾನಿಯಾ ಶೇಕ್, (ಸ್ಟರ್ಲಿಂಗ್ ಸ್ಕೂಲ್, ನೆರೂಳ್) ಪ್ರಥಮ, ದ್ವಿತೀಯ ಹಾಗೂ ತೃತೀಯ, ಬರವಣಿಗೆಯಲ್ಲಿಅನ್ನಪೂರ್ಣ ನೋಚುರ್, (ಉದಯಾಂಚಲ್ ಹೈಸ್ಕೂಲ್, ವಿಕ್ರೋಲಿ), ರಾಧಿಕಾ ಧಾರ್ನಿಯ, (ಎಸ್‍ಬಿಒಎ ಪಬ್ಲಿಕ್ ಸ್ಕೂಲ್, ನೆರೂಳ್), ಗ್ಲೆನಿಸ್ ಡಿ’ಸೋಜ, (ಡಾನ್ ಬಾಸ್ಕೊನೆರೂಳ್) ಪ್ರಥಮ, ದ್ವಿತೀಯ ಹಾಗೂ ತೃತೀಯ, ಕ್ವಿಜ್‍ನಲ್ಲಿ ಕಾಂಚನ್ ಭಟ್ನಾಗರ್ ಮತ್ತು ಸ್ಯೆದಾ ಫಾರ್ಹತ್, (ಜೈಪುರಿಯಾರ್ ಸ್ಕೂಲ್ ಸಾನ್ಪಾಡ) ಪ್ರಥಮ, ಅಕ್ಷಯ್ ಮಾಟೆಗಾಂವ್ಕರ್, ತೀರ್ಥ್ ಪಟೇಲ್, (ಉದಯಾಂಚಲ್ ಹೈಸ್ಕೂಲ್, ವಿಕ್ರೋಲಿ) ದ್ವಿತೀಯ ಹಾಗೂ ಮರ್ಯಮ್ ಖಾನ್ ಮತ್ತು ಶೀತಲ್ಗಾ ಯಕ್ವಾಡ್ (ಚೆಂಬೂರ್ ಕರ್ನಾಟಕ ಹೈಸ್ಕೂಲ್, ಚೆಂಬೂರು) ತೃತೀಯ, ಹಾಗೂ ಸಮೂಹ ಜಾನಪದ ನೃತ್ಯದಲ್ಲಿ ಎಸ್‍ಬಿಒಎ ಪಬ್ಲಿಕ್ ಸ್ಕೂಲ್ ನೆರೂಳ್, ಉದಯಾಂಚಲ್ ಹೈಸ್ಕೂಲು ವಿಕ್ರೋಲಿ ಮತ್ತು
ಜೈಪುರಿಯಾರ್ ಸ್ಕೂಲ್ ಸಾನ್ಪಾಡ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದವು. ಎಸ್‍ಬಿಒಎ ಪಬ್ಲಿಕ್ ಸ್ಕೂಲ್ ನೆರೂಳ್ ಹೆಚ್ಚಿನ ಬಹುಮಾನಗಳನ್ನು ಗಳಿಸಿ ಉತ್ತಮ ಶಾಲೆಯಾಗಿ ಪ್ರಥಮ ಹಾಗೂ ಉದಯಾಂಚಲ್ ಹೈಸ್ಕೂಲ್, ವಿಕ್ರೋಲಿ ದ್ವಿತೀಯ ಬಹುಮಾನಗಳನ್ನು ಗಳಿಸಿದವು. ಸ್ಪರ್ಧೆಗಳ ತೀರ್ಪುಗಾರರಾಗಿ ಶೈಲಿನಿ ರಾವ್, ಸಹನಾ ಪೆÇೀತಿ, ಶಾಲಿನಿ ಪ್ರಸಾದ್, ಮಾಲಿನಿ ಕನಾಲ್, ಸಹನಾ ಭಾರದ್ವಾಜ್, ಮತ್ತು ಸೌಮ್ಯ ವಿ. ಉಪಾಧ್ಯಾಯ ಸಹಕರಿಸಿದರು. ಅನಿರುದ್ಧ ಭಟ್ ಹಾಗೂ ಪ್ರಿಯಾಂಜಲಿ ರಾವ್ ಕ್ವಿಜ್ ಕಾರ್ಯಕ್ರಮ ನಿರೂಪಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ವೈಟ್ ಪೆಟ್ರೋಲಿಯಂ ಇಂಡಸ್ಟ್ರೀಸ್‍ನ ಆಡಳಿತ ನಿರ್ವಹಣಾಧಿಕಾರಿ ಜಿ. ಎಂ ರಾವ್ ಹಾಗೂ ಅತಿಥಿsಗಳಾಗಿ ಸಂಘದ ಉಪಾಧ್ಯಕ್ಷವಾಮನ್ ಹೊಳ್ಳ, ಶೈಲಿನಿ ರಾವ್, ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಆಶ್ರಯ ಮುಖ್ಯಸ್ಥೆ ಚಂದ್ರಾವತಿ ರಾವ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ, ಭಾಗವಹಿಸಿದ ಎಲ್ಲಾ ವಿದ್ಯಾಥಿರ್s ಮತ್ತು ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಅಭಿನಂದಿದಿದರು. ಯುವ ವಿಭಾಗದ ಸಂಚಾಲಕ ದೀಪಕ್ ಶಿವತ್ತಾಯ, ವಿನೋದಿನಿ ರಾವ್, ಪ್ರಶಾಂತ್ ಹೆರ್ಲೆ, ಎ.ಪಿ.ಕೆ. ಪೆÇೀತಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಉತ್ತಮವಾಗಿ ನೆರವೇರಿಸಲ್ಪಟ್ಟಿದ್ದು, ವಿದ್ಯಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಪಿ.ಸಿ.ಎನ್ ರಾವ್ ಧನ್ಯವಾದ ಸಮರ್ಪಣೆ ಗೈದರು.

By suddi9

Leave a Reply

Your email address will not be published. Required fields are marked *