ಭೋಗಗಳ ಸೇವೆ ಜೀವನ ಬರಿದುಗೊಳಿಸುತ್ತದೆ: ಪುತ್ತಿಗೆಶ್ರೀ
ಮುಂಬಯಿ : ಅಂಧೇರಿ ಪಶ್ಚಿಮದ ಎಸ್.ವಿ.ರೋಡ್‍ನ ಇರ್ಲಾ ಅಲ್ಲಿನ ಶ್ರೀ ಆದಮಾರು ಮಠಕ್ಕೆ ಇಂದಿಲ್ಲಿ ಬುಧವಾರ ಉಡುಪಿ ಪುತ್ತಿಗೆ ಮಠದ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪಾದಾರ್ಪಣೆಗೈದು ಮಹಾಪೂಜೆನೆರವೇರಿಸಿದರು. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಮಂಡಳಿ ವಿಶ್ವಸ್ಥ ಸದಸ್ಯ, ಜ್ಯೋತಿಷ್ಯ ಆರ್.ಎಲ್ ಭಟ್ ಮತ್ತು ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯೆ, ಮಹಿಳಾ ಯಕ್ಷಗಾನದ ಅಪ್ರತಿಮ ಕಲಾವಿದೆ ಗೀತಾ ಆರ್.ಎಲ್ ಭಟ್ ದಂಪತಿ ಪುತ್ತಿಗೆಶ್ರೀಗಳಿಗೆ ಶ್ರೀಗಳನ್ನು ಭವ್ಯ ಸ್ವಾಗತ ಕೋರಿದರು ಹಾಗೂ ಭಿಕ್ಷಾ ಕಾರ್ಯಕ್ರಮ ನೆರವೇರಿಸಿ ಗುರುವಂದನೆ ನಡೆಸಿದರು. ಶ್ರೀ ಸುಗುಣೇಂದ್ರ ತೀರ್ಥರು ಮಹಾಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಜೀವನದಲ್ಲಿ ಸೇವೆಯಿಂದಲೇ ನೈಜ್ಯ ಸಂತೋಷ ಪ್ರಾಪ್ತಿಸುವುದು. ಸೇವೆಗೆ ಭಗವಂತನು ಎರಡು ಅವಕಾಶ ನೀಡಿದ್ದು ಅವುಗಳೇ ತ್ಯಾಗ ಮತ್ತು ಭೋಗಗಳ ಸೇವೆಯಾಗಿದೆ.

 

Puttigeshree Adamaru Mutt-1

Puttigeshree Adamaru Mutt-2

Puttigeshree Adamaru Mutt-4

Puttigeshree Adamaru Mutt-8

Puttigeshree Adamaru Mutt-9

Puttigeshree Adamaru Mutt-A1

Puttigeshree Adamaru Mutt-A2

Puttigeshree Adamaru Mutt-B1
ಸತ್ಕಾರ್ಮದಲ್ಲಿ ಸುಖ ತ್ಯಾಗಗಳ ಸೇವೆ ಒಳಗೊಂಡಿದ್ದು, ತ್ಯಾಗದಿಂದ ಶಾಶ್ವತ ಶಾಂತಿ ಸಿಗುತ್ತದೆ. ಇಂತಹ ಸೇವಾ ಶಾಂತಿ ಮನ, ಜೀವನಕ್ಕೆ ಸ್ಥಾಯಿತೃಪ್ತಿ ನೀಡಿದರೆ, ಭೋಗಗಳ ಸೇವೆ ಬರೇ ತತ್ಕಾಲಿಕವಾಗಿ ಜೀವನವನ್ನೇ ಬರಿದುಗೊಳಿಸುತ್ತದೆ. ದೀನದಲಿತರ ದುಃಖಪರ ಸೇವೆಯಿಂದ ಆನಂದ ಪ್ರಾಪ್ತಿಯಾಗುತ್ತಿದ್ದು, ಬೋಗದ ಖರ್ಚು ಅಲ್ಪಕಾಲಿಕ ವೆಚ್ಚವಾಗಿ ಮರೆಯಾಗುತ್ತದೆ. ಆದರೆತ್ಯಾಗದ ಕಾಲಕಳೆ ಸಂತೃಪ್ತಿಯ ಬೆಳೆಯಾಗಿ ಶಾಸ್ವತ ಸದಾನಂದ ನೀಡಬಲ್ಲದು ಎಂದು ನೀತಿಯನ್ನು ಸಾರಿದರು. ಗೃಹಸ್ಥರು ಮತ್ತು ಯತಿಗಳಿಗೆ ಅವಿನಾಭಾವ ಸಂಬಂಧವಿದ್ದು, ಇಂತಹ ಬಾಂಧವ್ಯ ಇಂದಿಲ್ಲಿ ರಾರಜಿಸಿದೆ. ಆರ್.ಎಲ್ ಭಟ್ ಪರಿವಾರವು ಇಂತಹ ಸಂಬಂಧವನ್ನು ಬೆಸೆದು ವಿಠಲ ಸೇವೆಗೆ ಪಾತ್ರರಾಗಿದ್ದಾರೆ. ಸೇವಕರ ಇಂತಹ ಸೇವೆ ಮೂಲಧನಿಗೆ ಸಲ್ಲುತ್ತದೆ. ಐಶ್ವರಮ್ಯಕ್ಕೆ ಗರಿಷ್ಠಖರ್ಚು ಮಾಡದೆ ತ್ಯಾಗಮಯಿಗಳಾಗಿ ವೈಯುಕ್ತಿಕವಾಗಿ ಸ್ವಂತಕ್ಕೆ ಕನಿಷ್ಠ ಖರ್ಚು ಮಾಡಿ ಸೇವಾ ಸದ್ಗುಣ ಬೆಳೆಸಿಕೊಳ್ಳಿರಿ. ಅವಕಾಶಕ್ಕೆ ಒಳಪಟ್ಟು ಸ್ವಂತಕ್ಕೆ ಸ್ವಲ್ಪವೇ ಖರ್ಚು ಮಾಡಿ ಸಂತೃಪ್ತಿ ಬದುಕು ಆನಂದಿಸಿರಿ. ಕಾರಣ ಬೋಗದಿಂದ ಕೊನೆಗೆ ನಿರಾಶೆ ಅತೃಪ್ತಿಯ ಬದುಕು ಕಟ್ಟಿಟ್ಟಬುತ್ತಿಯಾಗಬಲ್ಲದು. ಉಳ್ಳವರಾಗಲು ಸ್ವಂತಕ್ಕೆ ಬಳಸುವವರು ಕಳ್ಳರು. ಸೇವಾವಕಾಶ ಉಪಯೋಗಿಸಿ ಕೊಳ್ಳುವವರೇ ಜಾಣರು. ಸೇವಾ ಅವಕಾಶ ಮರೆಯುವವರು ದುಷ್ಟರು. ಆದುದರಿಂದ ಎಲ್ಲರೂ ಸೇವಾವಕಾಶ ಸದುಪಯೋಗಿಸಿಕೊಂಡು ಪುಣ್ಯ ಪ್ರಾಪ್ತಿಸಿರಿ. ಅನ್ನದಿಂದ ಸೌಭಾಗ್ಯ (ಸಂತೃಪ್ತಿ) ಹಣದಿಂದ ನಿರ್ಭಾಗ್ಯ (ಅಸಂತೃಪ್ತಿ) ಪ್ರಾಪ್ತಿ ಪಾವನ. ಸೇವಾಭಾವನೆಯಿಂದನೆಮ್ಮದಿಬದುಕು ಹಸನಾಗುವುದು ಎನ್ನುತ್ತಾನೆರೆದ ಸದ್ಭಕ್ತರನ್ನು ಆಶೀರ್ವಚನ ನೀಡಿದರು.
ಲಕ್ಷ್ಮೀಶ್ ಭಟ್ (ಆರ್.ಎಲ್ ಭಟ್) ಪೂಜಾಧಿಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಿ.ಆರ್ ರೆಸ್ಟೋರೆಂಟ್ ಸಮೂಹದ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ, ವಾಸುದೇವ ಉಡುಪ, ರಾಮಚಂದ್ರ ಭಟ್, ಶ್ರೀಪತಿ ಭಟ್, ರತೀಶ್ ತಂತ್ರಿ, ಪಂಜ ಭಾಸ್ಕರ್ ಭಟ್, ಪ್ರೇಮಾ ಎಸ್.ರಾವ್, ಶೈಲಿನಿ ರಾವ್, ವಾಣಿ ಭಟ್, ಸಹನಾ ಪೆÇೀತಿ, ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *