ಬಂಟ್ವಾಳ: ಬಯಲು ಪ್ರದೇಶಗಳಾದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಯ ನೆಪದಿಂದ ದ.ಕ. ಜಿಲ್ಲೆಯ ಜೀವನದಿಗಳಾದ ಕುಮಾರಧಾರ ನದಿ ಮತ್ತು ನೇತ್ರಾವತಿ ನದಿಗೆ ಗಂಡಾತರ ತರುವ ಎತ್ತಿನ ಹೊಳೆಯ ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಿ ತಾಲೂಕು ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರಗತಿಪರ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಬಂಟ್ವಾಳ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
DSC_0808

IMG_1728 (1)

IMG_1725 (1)
ಪಶ್ಚಿಮ ಘಟ್ಟದಿಂದ ಹುಟ್ಟಿ ಹರಿಯುತ್ತಿರುವ ನೇತ್ರಾವತಿ ನದಿಯು ಕೃಷಿಕರ ಪಾಲಿಗೆ ಜೀವಾಳವಾಗಿದೆ. ಈ ನದಿಯನ್ನು ತಿರುವುಗೊಳಿಸುವ ಯೋಜನೆ ಸಫಲವಾದಲ್ಲಿ ಖಂಡಿತವಾಗಿಯೂ ಕೃಷಿಕರ ಪರಿಸ್ಥಿತಿ ಶೋಚನೀಯವಾಗಲಿದೆ. ಮಂಗಳೂರು ನಗರಕ್ಕೆ ಸೇರಿದಂತೆ ಜಿಲ್ಲೆಯ ಜನರಿಗೆ ಪೂರೈಕೆಯಾಗುತ್ತಿರುವ ಕುಡಿಯೂವ ನೀರಿಗೂ ತೊಂದರೆ ಉಂಟಾಗಲಿದೆ. ಸಕಾರದ ಅವೈಜ್ಞಾನಿಕವಾದ ಹಾಗೂ ಏಕಪಕ್ಷಿಯವಾದ ತೀರ್ಮಾನದ ಈ ಯೋಜನೆಯನ್ನು ದ.ಕ. ಜಿಲ್ಲೆಯ ಪ್ರತಿಯೊಬ್ಬ ನಾಗರಿಕನೂ ವಿರೋಧಿಸಲೇ ಬೇಕಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಅಲ್ಲಿಪಾದೆ ,ಮಚ್ಚೇಂದ್ರ ಸಾಲ್ಯಾನ್, ಕೆ.ಎಚ್.ಅಬೂಬಕ್ಕರ್, ಇಬ್ರಾಹಿಂ ಕೈಲಾರ್, ಬಿ.ವಿಶ್ವನಾಥ, ರಾಜಾ ಚೆಂಡ್ತಿಮಾರ್, ರಾಮಚಂದ್ರ ಸುವರ್ಣ, ಪ್ರಭಾಕರ ದೈವಗುಡ್ಡೆ, ಹಾರೂನ್ ರಶೀದ್, ಸರಪಾಡಿ ಅಶೋಕ್ ಕುಮರ್, ಪಿಎ.ರಹೀಂ, ಶೆಟ್ಟಿ ಉಮೇಶ್ ಕುಮಾರ್, ಸತೀಶ್ ಅರಳ, ಎಂ.ಸುಬ್ರಹಣ್ಯ ಭಟ್, ಸುಕುಮಾರ್ ಬಂಟ್ವಾಳ್, ಸುಧಾಕರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *