ಸಾಮಾಜಿಕ ಬದ್ಧತೆಯೇ ರಾಜಕೀಯ ವ್ಯವಸ್ಥೆಯ ಜೀವಾಳ
ರಾಜಕೀಯದಲ್ಲಿ ಸಿದ್ಧಾಂತ ಕುರಿತ ಉಪನ್ಯಾಸದಲ್ಲಿ ಪ್ರೊ.ಉದಯ ಶೆಟ್ಟಿ
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ರಾಜಕೀಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿದ್ಯಾಗಿರಿಯ ಶುಕ್ರವಾರ ಮಧ್ಯಾಹ್ನ ರಾಜಕೀಯದಲ್ಲಿ ಸಿದ್ಧಾಂತ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

11mood Alvas politics
ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಉದಯ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ಹೋರಾಟ, ಅಭಿವೃದ್ಧಿ ಸಿದ್ಧಾಂತದೊಂದಿಗೆ ಗುರುತಿಸಿಕೊಂಡಿದ್ದ ರಾಜಕೀಯ ವ್ಯವಸ್ಥೆ ತದನಂತರ ಭೃಷ್ಟಾಚಾರದ ಹಾದಿ ಹಿಡಿಯಿತು. ಪ್ರಸ್ತುತ ರಾಜಕೀಯ ವ್ಯವಸ್ಥೆದಿಂದ ಭ್ರಷ್ಟಾಚಾರದಿಂದ ಕಲುಷಿತಗೊಂಡಿದ್ದು, ಅದನ್ನು ಶಮನ ಮಾಡುವ ನಿಟ್ಟಿನಲ್ಲಿ ಪ್ರಗತಿಪರ ಚಿಂತನೆ, ಭೃಷ್ಟಾಚಾರದ ಹೋರಾಟಗಳು ಹುಟ್ಟಿಕೊಂಡಿದೆ. ರಾಜಕೀಯದಲ್ಲಿ ಬುದ್ಧಿವಂತಿಕೆ, ಭಾವನಾತ್ಮಕತೆ ಹಾಗೂ ಧಾರ್ಮಿಕ ವಿಚಾರಗಳ ಮೇಲಿನ ನಿಲುವು ಕೂಡ ಮುಖ್ಯವಾಗುತ್ತದೆ. ಜನಪ್ರತಿನಿಧಿಗಳಿಗೆ ಸಾಮಾಜಿಕ ಬದ್ಧತೆಯಿದ್ದರೆ ಆಡಳಿತಾತ್ಮಕವಾಗಿ ಸುದೃಢಗೊಂಡು ದೇಶ ಅಭಿವೃದ್ಧಿಯಾಗುತ್ತದೆ. ಜನಪ್ರತಿನಿಧಿಗಳಿಗೆ ಸಾಮಾಜಿಕ ಕಾಳಜಿಯಿರಬೇಕು ಮಾತ್ರವಲ್ಲ ನಾಗರಿಕರಲ್ಲೂ ರಾಜಕೀಯ ಕುರಿತು ಸರಿಯಾದ ಪ್ರಜ್ಞೆಯಿರಬೇಕು.
ಆಳ್ವಾಸ್ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಶೇಖರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ್ ಬಿ. ಉಪಸ್ಥಿತರಿದ್ದರು. ಕೀರ್ತನಾ ಸ್ವಾಗತಿಸಿದರು. ವಿಭವ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *