ಬಂಟ್ವಾಳ: ಪರ್ಲಿಯಾ ನರ್ಸಿಂಗ್ ಹೋಮ್ ಬಳಿಯ ತಾಳಿಪಡ್ಪು-ಮದ್ದ ಬಳಿಯ ಚರಂಡಿ ರಚನೆ ಹಾಗೂ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು.

ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ , ಉಪಾಧ್ಯಕ್ಷೆ ಯಾಸ್ಮಿನ್ ಅಹ್ಮದ್ , ಬಂ.ಯೋಜನಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಜಿಲ್ಲಾ ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ಪ್ರವೀಣ್ ಬಿ., ಮಹಮ್ಮದ್ ಶರೀಫ್ , ಸದಾಶಿವ ಬಂಗೇರಾ, ರಾಮಕೃಷ್ಣ ಆಳ್ವ , ಮಹಮ್ಮೆದ ನಂದರಬೆಟ್ಟು, ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಪ್ರಮುಖರಾದ ಮಹಮ್ಮದ್ ನಂದಾವರ, ಜಲಾಲ್ ಜೆ.ಕೆ., ಹಮೀದ್, ವೆಂಕಪ್ಪ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
