_DSC1820

_DSC1806

_DSC1808

mathadana
mathadana

ಸುದ್ದಿ9 ಕೈಕಂಬ;
ಕೈಕಂಬ ಆಸುಪಾಸು ಲೋಕಸಭಾ ಚುನಾವಣೆ ಶಾಂತಿಯುವಾಗಿ ನಡೆದಿದ್ದು ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಶೇ. 60 ಮತದಾನ ನಡೆದಿದೆ ಎಂದು ಚುನಾವನಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಬೆಳಗ್ಗಿನಿಂದಲೇ ಉತ್ಸಾಹದಿಂದ ಪಾಲ್ಗೊಂಡ ಮತದಾರರು ಮಧ್ಯಾಹ್ನದ ವೇಳೆ ಸಂಖ್ಯೆ ಕೊಂಚ ಇಳಿಮುಖಗೊಂಡಿತ್ತು. ಆದರೆ ಬಿಸಿಲು ಸರಿಯುವುದನ್ನೇ ಕಾಯುತ್ತಿದ್ದ ಮತದಾರರು ಗಂಟೆ ಮೂರರ ನಂತರ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನ್ನ ಹಕ್ಕನ್ನು ಚಲಾಯಿಸಿದರು.
ಕೆಲವು ಕಡೆ ಮತದಾನದ ವೇಳೆ ಗೊಂದಲ ಉಂಟಾಗಿದ್ದು ಮತಪಟ್ಟಿಯಲ್ಲಿ ಹೆಸರು ಬದಲಾಗಿದ್ದರಿಂದ ಮತಗಟ್ಟೆಯ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡ ಘಟನೆ ನಡೆದಿದೆ. ಹೊರದೇಶದಿಂದ ಬಂದ ನಾಗರೀಕರು ಇಲ್ಲಿ ಬಂದು ಪರಿಶೀಲಿಸಿದಾಗ ಅವರ ಹೆಸರು ಡಿಲೀಟ್ ಆಗಿದ್ದರಿಂದ ತನ್ನ ಹಕ್ಕಿನಿಂದ ವಂಚಿತರಾಗಿದ್ದಾರೆ. ಕೆಲವರು ಮತದಾನಕ್ಕಾಗಿ ಮತ್ತೆ ಅಜರ್ಿ ಸಲ್ಲಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಓಟರ್ ಐಡಿ ಬಾರದ ಕಾರಣ ಹಕ್ಕು ಚಲಾಯಿಸಲಾಗಲಿಲ್ಲ. ಕೆಲವು ಕಡೆಗಳಲ್ಲಿ ಓಟರ್ ಐಡಿಗಳಲ್ಲಿ ಹೆಸರು, ವಯಸ್ಸು ಹೆಚ್ಚುಕಮ್ಮಿಯಾಗಿದ್ದರಿಂದ ಮತದಾನ ಕ್ಷೇತ್ರದಲ್ಲಿ ಚಟುವಟಿಕೆಯಲ್ಲಿದ್ದ ಕಾರ್ಯಕರ್ತರಲ್ಲಿ ಗೊಂದಲ ಪರಿಹರಿಸುತ್ತಿದ್ದು, ಈ ಬಾರಿ ಓಟ್ ಹಾಕಿ ನಂತರ ಎಲ್ಲಾ ಸಮ ಮಾಡೋಣ ಎಂಬ ಹೇಳಿಕೆಗಳು ಸಾಮಾನ್ಯವಾಗಿತ್ತು.
ಜಬರ್ದಸ್ತು ತೋರಿಸುತ್ತಿದ್ದ ಪೊಲೀಸರು:
ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ಸೂರಲ್ಪಾಡಿ, ಗುರುಪುರ ಮತಗಟ್ಟೆಗಲ್ಲಿ ಕಾವಲು ಕಾಯುತ್ತಿದ್ದ ಪೊಲೀಸರು ಮತದಾರರಲ್ಲಿ ಜಬರ್ದಸ್ತು ತೋರಿದ್ದಾರೆಂದು ಆರೋಪಿಸಲಾಗಿದೆ. ಎಂದು ಏರುದನಿಯಲ್ಲಿ ಮಾತಾಡುತ್ತಿದ್ದ ಪೊಲೀಸರ ದುರ್ನನಡತೆಯಿಂದ ಬೇಸೆತ್ತ ಮತದಾರರು ಮತಗಟ್ಟೆಯಲ್ಲೇ ಜಗಳ ಕಾಯ್ದಿದ್ದರು. ಆದರೆ ಮತದಾನದ ಅಧಿಕಾರಿಗಳು ಮತದಾರರನ್ನು ಹಾಗೂ ಪೊಲೀಸರನ್ನು ಮೌನವಾಗಿರುವಂತೆ ಸೂಚಿಸಿದ್ದಾರೆ.
ಮತದಾನ ಮಾಡಿದ ನಂತರ ಅಜ್ಜಿ ಗೊಟಕ್:
ಮೂಡುಶೆಡ್ಡೆ ಸಮೀಪದ ಶಿವನಗರ ನೇತಾಜಿ ಶಾಲೆಯ 187 ನೇ ಬೂತಿನಲ್ಲಿ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿ ಬಂದ ಅಜ್ಜಿಯೋರ್ವರು ತನ್ನ ಹಕ್ಕನ್ನು ಚಲಾಯಿಸಿದ ನಂತರ ಹ್ರದಯಘಾತದಿಂದ ಸಾವನ್ನಪ್ಪಿದ್ದಾರೆ. ಸುಮಾರು 74 ವರ್ಷ ಪ್ರಾಯದ ಹಿರಿಯಜ್ಜಿ ಗಂಗಮ್ಮ ಬೆಳಿಗ್ಗೆ ಸಂತೋಷದಿಂದಲೇ ಮತಗಟ್ಟೆಗೆ ಆಗಮಿಸಿ ತನ್ನ ಹಕ್ಕನ್ನು ಚಲಾಯಿಸಿ ಕೊನೆಯುಸಿರು ಎಳೆದಿರುವುದುರಿಂದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಅಜ್ಜಿಯ ಹೆಬ್ಬೆರಳಿಗೆ ಶಾಯಿ ಹಾಖಿದ ನಂತರ ಗಂಗಮ್ಮ [ಅಜ್ಜಿ,] `ಉಂದು ದಾನೆ ಇಸತರ್ಿ ಕೊಂಬಬಿರೆಲ್ಗೆ ಸಾಯಿ ಪಾಡುನೆ?’ ಎಂದು ಕೇಳುತ್ತಿದ್ದಂತೆ ಅಜ್ಜಿಯ ಉಸಿರು ಮೇಲಕ್ಕೆ ಹೋಗಿದ್ದು ಗಂಗಮ್ಮ [ಅಜ್ಜಿ] ಇಹಲೋಕ ತ್ಯಜಿಸಿದ್ದಾರೆ.
ಅಮ್ಮುಂಜೆ: ಎಸ್ಡಿಪಿಐ-ಕಾಂಗ್ರೆಸ್ ಮಾತಿನ ಚಕಮಕಿ:
ಅಮ್ಮುಂಜೆಯ ಮತಗಟ್ಟೆಯಲ್ಲಿ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಕಾರ್ಯಕರ್ತರ ನಡುವೆ ಸ್ವಲ್ಪ ಮಟ್ಟಿನ ಮಾತಿನ ಚಕಮಕಿ ಉಂಟಾಗಿದ್ದು ಪೊಲೀಸರ ಸಮಯೋಚಿತ ಮುಂಜಾಗ್ರತೆಯಿಂದ ಪರಿಸ್ಥಿತಿ ಶಾಂತಿಯುತಗೊಂಡಿದೆ. ಓಟ್ ಹಾಕುವ ವಿಚಾರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಕ್ಷುಲಕ್ಕ ವಿಚಾರಕ್ಕೆ ಈ ಚಕಮಕಿ ಸಂಭವಿಸಿದೆ ಎನ್ನಲಾಗಿದೆ. ಇದೊಂದು ಅಹಿತಕರ ಘಟನೆಯನ್ನು ಬಿಟ್ಟರೆ ಉಳಿದೆಲ್ಲಾ ಕಡೆ ಶಾಂತಿಯುತ ಮತದಾನ ನಡೆದಿದೆ. ಕಳೆದ ವಿದಾನ ಸಭಾ ಚುನಾವಣೆಯ ವೇಳೆ ಅಡ್ಡೂರು ಮತಗಟ್ಟೆಯಲ್ಲಿ ಕಾರ್ಯಕರ್ತರ ಮಧ್ಯೆ ಮಾರಾಮರಿ ಉಂಟಾಗಿದ್ದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈ ಬಾರಿ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದರಿಂದ ಸಂಜೆಯವರೆಗೂ ಮತದಾನ ಶಾಂತಿಯುವಾಗಿ ನಡೆದಿದೆ.
ಶಾಂತಿ ಶಾಂತಿ ಶಾಂತಿ:
ಬಜ್ಪೆ ಠಾಣಾ ವ್ಯಾಪ್ತಿ ಹಾಗೂ ಬಂಟ್ವಾಳ ಠಾಣಾ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿತ್ತು. ಪೊಲೀಸರು ಅಲ್ಲಲ್ಲಿ ಬಿಗಿ ಪಹರೆ ಕಾಯ್ದುಕೊಂಡಿದ್ದು ಶಾಂತಿಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ ಕೆಲವು ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಮತದಾನದ ಅಧಿಕಾರಿಗಳು ಕರ್ತವ್ಯ ಪಾಲನೆಗೆ ನಿಯೋಜನೆಗೊಂಡಿದ್ದರಿಂದ ತನ್ನ ಹಕ್ಕನ್ನು ಕಳೆದುಕೊಂಡಿದ್ದರು. ಅಲ್ಲದೆ ಅವರಿಗೆ ಮತದಾನ ನಡೆಸಲು ಅವರಿಗೆ ಬದಲಿ ವ್ಯವಸ್ಥೆ ನಡೆಸಲಿಲ್ಲ ಎಂದು ಕೆಲವು ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.
ಮುಖಂಡರಿಂದ ಮತಗಟ್ಟೆಗೆ ಭೇಟಿ:
ಆರ್ಎಸ್ಎಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ, ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಶಾಸಕ ರಮಾನಾಥ ರೈ ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಮತಗಟ್ಟೆಗೆ ಭೇಟಿಯಾಗಿದ್ದರು.

By suddi9

Leave a Reply

Your email address will not be published. Required fields are marked *