ಮೂಡುಬಿದಿರೆ: ಕಡಬದ ಸೈಂಟ್ ಜೋಕಿನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ಗ್ರಾಮಾಂತರವನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ತಂಡಗಳು ಪ್ರಶಸ್ತಿ ಪಡೆದಿದೆ.
ಆಳ್ವಾಸ್ ಬಾಲಕಿಯರ ತಂಡ ಬಂಟ್ವಾಳವನ್ನು ಪ್ರತಿನಿಧಿಸಿದ ಕರ್ನಾಟಕ ಪಿ.ಯು. ಕಾಲೇಜು, ಮಾಣಿ ತಂಡವನ್ನುಸೋಲಿಸಿ ಫೈನಲ್ ಪ್ರವೇಶಿಸಿದರೆ ಮಂಗಳೂರಿನ ವಿಕಾಸ್ ಪದವಿಪೂರ್ವ ಕಾಲೇಜು ತಂಡ ಎಸ್.ಡಿ.ಎಂ. ಉಜಿರೆ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಆಳ್ವಾಸ್ ಬಾಲಕಿಯರ ತಂಡ ಮಂಗಳೂರಿನ ವಿಕಾಸ್ ಪದವಿಪೂರ್ವ ಕಾಲೇಜನ್ನು 25-13 ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.


ಫೈನಲ್ ಪಂದ್ಯದಲ್ಲಿ ಆಳ್ವಾಸ್ ಬಾಲಕರ ತಂಡ ಬೆಳ್ತಂಗಡಿಯನ್ನು ಪ್ರತಿನಿಧಿಸಿದ ಮುಂಡಾಜೆ ಪಿ.ಯು. ಕಾಲೇಜು, ಮುಂಡಾಜೆ ತಂಡವನ್ನು 26-22 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಸೆಮಿಫೈನಲ್ನಲ್ಲಿ ಆಳ್ವಾಸ್ ಬಾಲಕರ ತಂಡ ಪುತ್ತೂರನ್ನು ಪ್ರತಿನಿಧಿಸಿದ ಸೈಂಟ್ ಜೋಕಿನ್ಸ್ ಪದವಿಪೂರ್ವ ಕಾಲೇಜು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ ಮುಂಡಾಜೆ ಪಿ.ಯು. ಕಾಲೇಜು, ಮುಂಡಾಜೆ ತಂಡ ಬಂಟ್ವಾಳವನ್ನು ಪ್ರತಿನಿಧಿಸಿದ ಕರ್ನಾಟಕ ಪಿ.ಯು. ಕಾಲೇಜು, ಮಾಣಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಬಾಲಕರ ವಿಭಾಗದಲ್ಲಿ ಉತ್ತಮ ಹಿಡಿತಗಾರನಾಗಿ ಆಳ್ವಾಸ್ನ ಜಗದೀಶ್ ಮತ್ತು ಸರ್ವಾಂಗೀಣ ಆಟಗಾರನಾಗಿ ಆಳ್ವಾಸ್ನ ಹರ್ಷಿತ್, ಎಸ್.ಡಿ.ಎಂ ಉಜಿರೆಯ ದೀಪ್ತಿ ಉತ್ತಮ ದಾಳಿಗಾರ್ತಿ ಯಾಗಿ ಮೂಡಿಬಂದರು. ಬಾಲಕಿಯರ ವಿಭಾಗದಲ್ಲಿ ಉತ್ತಮ ಹಿಡಿತಗಾರ್ತಿ ಆಳ್ವಾಸ್ನ ಹರ್ಷಿತ ಮತ್ತು ಸರ್ವಾಂಗೀಣ ಆಟಗಾರನಾಗಿ ಆಳ್ವಾಸ್ನ ಧನಲಕ್ಷ್ಮಿ ಮೂಡಿಬಂದರು.
