ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.9ರಂದು ಬುಧವಾರ ತೆನೆ ಹಬ್ಬವನ್ನು ಆಚರಿಸಲಾಯಿತು. ಅಂದು ಬೆಳಗ್ಗೆ ಸಾವಿರ ಸೀಮೆಯ ಭಕ್ತಾದಿಗಳು ತೆನೆ ಹಬ್ಬದಲ್ಲಿ ಪಾಲ್ಗೊಳ್ಳುವರು . ಅಖಿಲೇಶ್ವರ ದೇವಸ್ತಾನದ ಹತ್ತಿರದ ಗದ್ದೆಯಲ್ಲಿ ನಾಟಿಮಾಡಿ ಕೊಯಿಲಿಗೆ ಬಂದ ತೆನೆಗಳನ್ನು ತೆಗೆದು ಅಲ್ಲಿಂದ ದೇವಸ್ಥಾನದ ಮುಂಬಾಗದಲ್ಲಿ ತಂದಿಡುತ್ತಾರೆ. ಗುತ್ತಿನವರು ಊರ ಭಕ್ತಾಧಿಗಳು ಅರ್ಚಕರು , ಮೊಕ್ತೇಸರರು , ತಂತ್ರಿಗಳು ,ಸ್ಥಾನದವರು,ಉಪಸ್ಥಿತರಿರುವರು.

ಬೆಳಗ್ಗೆ ದೇವರ ಪೂಜೆ ನೆರವೇರಿದ ಬಳಿಕ ದೇವಳದ ಅರ್ಚಕರು ಸೇರಿ ದ್ವಜಸ್ಥಂಭದ ಬುಡದಲ್ಲಿ ಕದಿಕೆ ದಡ್ಡಲ್ ನಾರ್ ಹಾಗೂ ಹೊಸತಾಗಿ ಬೆಳೆದ ತರಕಾರಿಗಳನ್ನು ಇಟ್ಟು ದೇವಸ್ಥಾನದ ಮುಂಬಾಗದಲ್ಲಿಟ್ಟ ತೆನೆಯನ್ನು ಹೊತ್ತುಕೊಂಡು ಪದಾರ್ಥಿಗಳು ಬಂದು ಅರ್ಚಕರಲ್ಲಿ ಕೊಡುತ್ತಾರೆ ಅರ್ಚಕರು ನಿತ್ಯ ಬಲಿ ಉತ್ಸವ ನೆರವೇರಿಸುವವರ ತಲೆಯ ಮೇಲೆ ಹೊತ್ತುಕೊಂಡು ದೇವಸ್ಥಾನದ ಸುತ್ತು ಬಂದು ದೇವರ ಎದುರಿನಲ್ಲಿ ಇಟ್ಟು ಪೂಜೆ ನೆರವೇರಿಸುತ್ತಾರೆ ತೆನೆಯನ್ನು ದೇವರ ಮಡಿಲಲ್ಲಿ ತುಂಬಿಸಿದ ಬಳಿಕ ದೇವಸ್ಥಾನದಲ್ಲಿ ಸೇರಿದ ಭಕ್ತರು ಬಾಳೆಎಲೆಯನ್ನು ಹಾಕಿ ಪ್ರಸಾದ ಹಾಗೂ ತೆನೆಗಳನ್ನು ಸ್ವೀಕರಿಸಲು ಕಾದಿರುತ್ತಾರೆ. ಅರ್ಚಕರು ಬಾಳೆಎಲೆಗೆ ತೆನೆ ಹಾಗೂ ದೇವರ ಪ್ರಸಾದ ಹಾಕಿದ ನಂತರ ತೆನೆಗಳನ್ನು ಮನೆಯಲ್ಲಿ ಕೊಂಡೋಗಿ ಮನೆತುಂಬಿಸುತ್ತಾರೆ. ಹೊಸ ಅಕ್ಕಿಯಿಂದ ಮಾಡಿದ ನೈವೇದ್ಯವನ್ನು ಸಮರ್ಪಿಸಿ ಭಕ್ತರೆಲ್ಲಾ ನೈವೇದ್ಯವನ್ನು ಮನೆಗೆ ಕೊಂಡೋಗಿ ಮನೆ ಮಂದಿಯೆಲ್ಲಾ ಸೇರಿ ಹೊಸಕ್ಕಿ ( ಪುದ್ದರು ) ಊಟ ಮಾಡುವುದು ವಾಡಿಕೆ.
















