ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಕೈಕುಂಜೆ ಎಂಬಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ರೂ 4.39 ಕೋಟಿ ವೆಚ್ಚದ ಮೆಸ್ಕಾಂ ವಿಭಾಗೀಯ ಕಚೇರಿ ಕಟ್ಟಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಸೋಮವಾರ ಸಂಜೆ ಶಿಲಾನ್ಯಾಸ ನೆರವೇರಿಸಿದರು.

ಒಟ್ಟು ಮೂರು ಅಂತಸ್ತುಗಳ ಕಟ್ಟಡದಲ್ಲಿ ಮೆಸ್ಕಾಂ ವಿಭಾಗೀಯ ಕಚೇರಿ ಸಹಿತ ಬಂಟ್ವಾಳ ಉಪ ವಿಭಾಗದ 1 ಮತ್ತು 2 ಹಾಗೂ ದಾಸ್ತಾನು ಮಳಿಗೆ ಕಛೇರಿಯೂ ಹೊಂದಿರುತ್ತದೆ ಎಂದು ಬಂಟ್ವಾಳ ವಿಭಾಗ ಕಾರ್ಯನಿರ್ವಹಕ ಎಂಜಿನಿಯರ್ ಉಮೇಶ್ಚಂದ್ರ ಕೆ.ವಿ. ತಿಳಿಸಿದರು.
ಬುಡಾ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಪುರಸಭಾಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಯಾಸ್ಮಿನ್, ಸದಸ್ಯರಾದ ಪಿ. ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಪ್ರವೀಣ್ ಬಿ., ಮಹಮ್ಮದ್ ಶರೀಫ್, ಸದಾಶಿವ ಬಂಗೇರ, ಸುಗುಣ ಕಿಣಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಸಮಿತಿ ಅಧ್ಯಕ್ಷ ಅಬ್ಬಾಸ್ ಅಲಿ, ಮಧುಸೂದನ ಶೆಣೈ, ಗುತ್ತಿಗೆದಾರ ಪ್ರಭಾಕರ ಎಯ್ಯಾಡಿ, ಮೆಸ್ಕಾಂ ವ್ಯವಸ್ಥಾಪನಾ ನಿರ್ದೇಶಕ ಚಿಕ್ಕನಂಜಪ್ಪ, ತಾಂತ್ರಿಕ ನಿರ್ದೇಶಕ ರಾಮಕೃಷ್ಣ, ಮುಖ್ಯ ಎಂಜಿನಿಯರ್ ಮಹಾದೇವಪ್ಪ, ಅಧೀಕ್ಷಕ ಎಂಜಿನಿಯರ್ ಸುಕುಮಾರ್, ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಸೆಲ್ವರಾಜ್, ವಿ. ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
—
