ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನ ಬಳಿ ನಿರ್ಮಾಣಗೊಳ್ಳಲಿರುವ ಸರ್ಕಾರಿ ಬಸ್ನಿಲ್ದಾಣಕ್ಕೆ ಜೆಸಿಬಿ ಮೂಲಕ ಶನಿವಾರ ಜಮೀನು ಸಮತಟ್ಟುಗೊಳಿಸುವಾಗ ನಿಧಿ ಕುರುಹು ಪತ್ತೆಯಾಗಿದೆ ಎಂಬ ಸುದ್ದಿ ತಿಳಿದು ಸುದ್ದಿ ಎಲ್ಲೆಡೆ ತಿಳಿಯುತ್ತಿದಂತೆಯೇ ದಿನವಿಡೀ ಅಪಾರ ಮಂದಿ ಧಾವಿಸಿ ವೀಕ್ಷಿಸಿದರು.


ನಗರ ಠಾಣೆ ಎಎಸೈ ಸಂಜೀವ, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಸಹಾಯಕ ಸದಾಶಿವ ಮತ್ತಿತರರು ಇದ್ದರು . ಇತಿಹಾಸ ತಜ್ಞ ಪ್ರೊ.ಕೆ.ತುಕಾರಾಮ ಪೂಜಾರಿ ಮತ್ತಿತರರು ಧಾವಿಸಿ ಮಣ್ಣು ಪರಿಶೀಲನೆ ನಡೆಸಿದರು.


