ಬಂಟ್ವಾಳ: ಮಹಿಳೆಯರು ಅವಕಾಶಗಳನ್ನು ಉಪಯೋಗಿಸಿಕೊಂಡು ಜವಬ್ದಾರಿಯುತವಾದ ಕೆಲಸಗಳನ್ನು ಮಾಡಿದಾಗ ಮಹಿಳಾ ಸಬಲೀಕರಣ ಸಾಧ್ಯ ಎಂದು ಜಿ.ಪಂ.ಸದಸ್ಯೆ ಮಮತಾ ಗಟ್ಟಿ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವುದ್ದಿ ಇಲಾಖೆ, ಬಿ.ಕಸ್ಬಾ ಅಂಗನವಾಡಿ ಕೆಂದ್ರಗಳು ಮತ್ತು ಅನ್ನಪೂರ್ಣ ಹಾಗೂ ಮೂಕಾಂಬಿಕ ಸ್ರ್ತೀ ಶಕ್ತಿ ಗೊಂಚಲು ನರಿಕೊಂಬು ಇದರ ಸಹಯೋಗದಿಂದ ಪಿತ್ತಿಲಗುಡ್ಡೆ ಜೈನ್ ಕಂಪೌಂಡ್ ಸಭಾಭವನದಲ್ಲಿ ನಡೆದ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜವಬ್ದಾರಿಯನ್ನು ಅರಿತುಕೊಂಡು ಮಹಿಳೆಯರು ಪ್ರಥಮವಾಗಿ ಪೌಷ್ಟಿಕ ಆಹಾರವನ್ನು ಸೇವಿಸಿದರೆ ಅ ಕುಟುಂಬ ಆರೋಗ್ಯವಂತವಾಗಿರಲು ಸಹಕಾರಿಯಾಗುತ್ತದೆ. ಜೊತೆಗೆ ಉತ್ತಮವಾದ ಶಿಕ್ಷಣಕ್ಕೆ ಪಡೆಯಲು ಆರೋಗ್ಯ ಬಹುಮುಖ್ಯವಾಗಿರುತ್ತದೆ ಎಂದರು. ಪೌಷ್ಟಿಕ ಆಹಾರ ಕೊರತೆಯಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀಳಬಾರದು ಎಂದು ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಇದರ ಸದುಪಯೋಗವನ್ನು ಮಹಿಳೆಯರು ಪಡೆಯಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಕೊಂಬು ಗ್ರಾ.ಪಂ.ಅಧ್ಯಕ್ಷೆ ಯಶೋದರ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ.ಸದಸ್ಯ ಆನಂದ ಎ.ಶಂಭೂರು,ಗ್ರಾ.ಪಂ.ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ, ಗ್ರಾ.ಪಂ.ಸದಸ್ಯರಾದ ಮಾದವ ಕರ್ಬೆಟ್ಟು, ವಿಶ್ವನಾಥ ಪೂಜಾರಿ, ರವೀಂದ್ರ ಸಪಲ್ಯ, ತ್ರಿವೇಣಿ ಮೋನಪ್ಪ ಪೂಜಾರಿ,ಜುಬೈದಾ, ದಿವಾಕರ ಭಂಡಾರಿ, ವಿನಯ ಪದ್ಮನಾಭ, ಗೀತಾಪದ್ಮನಾಭ, ಕಿಶೋರ್ ಶೆಟ್ಟಿ, ಚಂದ್ರವಾತಿಪ್ರಭಾಕರ ಬಂಗೇರ, ಕೆಡಿ.ಪಿ ಸದಸ್ಯ ಉಮೇಶ್ ಬೋಳಂತೂರು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ನರ್ಸಿಂಗ್ ಕಾಲೇಜಿನ ಬ್ರಿಡ್ಜಟ್ ಡಿ. ಸಿಲ್ವ, ಬಾಳ್ತಿಲ ಪ್ರಾಥಮಿಕ ಆರೋಗ್ಯ ಸಹಾಯಕಿ ಸುಮನ ಉಪಸ್ಥಿತರಿದ್ದರು.
ಹೇಮಲತಾ ಸ್ವಾಗತಿಸಿ ಸುನೀತಾ ವಂದಿಸಿದರು. ಮೇಲ್ವಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸದರು.

