ಕೈಕಂಬ: ಕತ್ತಲಿನಿಂದ ಬೆಳಕಿನೆಡೆಗೆ ಎನ್ನುವ ಹಾಗೆ ಮಕ್ಕಳನ್ನು ಸಂಸ್ಕಾರಯುತ ವ್ಯಕ್ತಿಯನ್ನಾಗಿಸ ಬೇಕಾದರೆ ಅವರಿಗೆ ಶಿಕ್ಷಣದ ಅವಶ್ಯಕತೆ ಇರುತ್ತದೆ. ಶಿಕ್ಷಣವನ್ನು ಪಡೆಯುವಂತಹ ಸಂದರ್ಭದಲ್ಲಿ ಅವರಿಗೆ ಆನೇಕ ಅಡೆತಡೆಗಳು ಇರುತ್ತದೆ. ಅಂತಹ ಅಡೆತಡೆಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಚೈಲ್ಡ್ ಫಂಡ್ ಇಂಡಿಯಾ ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ಪ್ರಶಂಸೆ ವ್ಯಕ್ತಪಡಿಸಿದರು.

ಅವರು ಸೆ.4 ರಂದು ಶುಕ್ರವಾರ ಮಂಗಳಜ್ಯೋತಿ ಸಮಗ್ರ ಶಾಲೆಯ ಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿ ಚೈಲ್ಡ್ ಪಂಡ್ ಇಂಡಿಯಾ ಸಂಸ್ಥೆ ಪುಸ್ತಕಗಳು ನನ್ನ ಸ್ನೇಹಿತರು ಎಂಬ ಆಂದೋಲನದ ಪ್ರಯುಕ್ತ ಚೈಲ್ಡ್ ಪಂಡ್ ಇಂಡಿಯಾ ಮಂಗಳ ಜ್ಯೋತಿ ಸಮಗ್ರ ಶಾಲೆಯಲ್ಲಿ ಪೋಷಕತ್ವವನ್ನು ಹೊಂದಿರುವ ಮಕ್ಕಳಿಗೆ ಸೋಲಾರ್ ದೀಪ ವಿತರಣಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸೋಲಾರ್ ದೀಪವನ್ನು ವಿತರಿಸಿದ ಕರ್ನಾಟಕದ ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡುತ್ತಾ ಇತ್ತೀಚಿನ ದಿನದಲ್ಲಿ ಮಕ್ಕಳನ್ನು ಅಂಧಕಾರದ ಬದುಕಿನಿಂದ ಬೆಳಕಿನ ಕಡೆಗೆ ಕರೆದುಕೊಂಡು ಹೋಗುತ್ತ್ತಿರುವುದು ಅವಶ್ಯಕವಾಗಿರುತ್ತದೆ. ಮಕ್ಕಳು ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕಾದರೆ ಓದುವುದಕ್ಕೆ ಪೂರಕವಾದಂತಹ ವಾತವರಣವನ್ನು ನಿರ್ಮಿಸಿಕೊಡುವುದು ಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಓದುವುದಕ್ಕೆ ಅನುಕೂಲವಾಗುವ ಸೋಲಾರ್ ದೀಪವನ್ನು ಚೈಲ್ಡ್ ಫಂಡ್ ಇಂಡಿಯಾವು ಕೊಡುವುದರ ಮೂಲಕ ಮಕ್ಕಳ ಬಾಳಲ್ಲಿ ಬೆಳಕನ್ನು ಹೊರ ತೆಗೆಯುವ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೋ. ಎ. ರಾಜೇಂದ್ರ ಶೆಟ್ಟಿ ವಹಿಸಿ ಮಾತನಾಡುತ್ತಾ ನಾವು ಜಗತ್ತಿನಲ್ಲಿ ಗೊತ್ತಿದ್ದೂ ಮತ್ತು ಗೊತ್ತಿಲ್ಲದೆ ಒತ್ತಡದ ಜೀವನವನ್ನು ನಡೆಸುತ್ತಿದ್ದು ಮತ್ತು ಈ ಒತ್ತಡವನ್ನು ಮುಂದಿನ ಪೀಳಿಗೆಗೆ ಒದಗಿಸಿ ಕೊಡುವುದು ಬೇಡ ಮತ್ತು ನಮ್ಮ ಮನೋಭಾವನೆ ಯಾವಾಗ ಬದಲಾಗುತ್ತದೆಯೋ ಆವಾಗ ಮಾತ್ರ ಎಲ್ಲವನ್ನು ಸಾಧಿಸಲು ಸಾಧ್ಯ. ಇಂತಹ ಮಾನವೀಯ ಮೌಲ್ಯಗಳನ್ನು ಚೈಲ್ಡ್ ಫಂಡ್ ಇಂಡಿಯಾದ ಮೂಲಕ ಕಾಣಬಹುದು ಎಂದು ತಿಳಿಸಿದರು.
ಮಂಗಳಜ್ಯೋತಿ ಸಮಗ್ರ ಶಾಲೆ ಚೈಲ್ಡ್ ಫಂಡ್ ಇಂಡಿಯಾ ಯೋಜನಾಧಿಕಾರಿಗಳಾದ ಪುನೀತ್ ಡಿ ಶೆಟ್ಟಿ ಕಾರ್ಯಕ್ರಮ ಆಂದೋಲನದ ಬಗ್ಗೆ ಮಾತನಾಡುತ್ತಾ ಉಜ್ವಲ ಭವಿಷ್ಯದ ಕಡೆಗೆ ಎನ್ನುವಂತಹ ಗುರಿಯನ್ನು ಇಟ್ಟುಕೊಂಡು ಮಕ್ಕಳ ಕಲಿಕೆಗೆ ಇರುವಂತಹ ಅಡೆತಡೆಗಳನ್ನು ನಿರ್ಮೂಲನೆ ಮಾಡುವುದು ಈ ನಿಟ್ಟಿನಲ್ಲ್ಲಿ ಚೈಲ್ಡ್ ಫಂಡ್ ಇಂಡಿಯಾವು ಹಿಂದುಳಿದ ಮತ್ತು ಪೋಷಕತ್ವವನ್ನು ಹೊಂದಿರುವ 6ರಿಂದ 14 ವಯಸ್ಸಿನ ಒಟ್ಟು 170 ಮಕ್ಕಳಿಗೆ ಸೋಲಾರ್ ದೀಪವನ್ನು ವಿತರಿಸಲಾಗುವುದು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿಗಳಾದ ಗಣೇಶ್ ಭಟ್ ಉಪಸ್ಥಿತರಿದ್ದರು
ಮಂಗಳಜ್ಯೊತಿ ಸಮಗ್ರ ಶಾಲೆಯ ಚೈಲ್ಡ್ ಫಂಡ್ ಇಂಡಿಯಾದ ಯೋಜನಾಧಿಕಾರಿ ಪುನೀತ್ ಶೆಟ್ಟಿ ಸ್ವಾಗತಿಸಿ, ಪ್ರೌಡಶಾಲಾ ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು. ಮಮತ ವರದಿ ವಾಚಿಸಿದರು ರಮ್ಯ ಕಾರ್ಯಕ್ರಮ ನಿರೂಪಿಸಿದರು.














