ಮೂಡುಬಿದಿರೆ:ಸ್ವಾಮಿ ವಿವೇಕಾನಂದ ಮತ್ತು ಮಾಜಿ ಪ್ರಧಾನಿ ವಾಜಪೇಯಿ ಗೋಮಾಂಸ ಪ್ರಿಯರು ಎಂದು ಸಾರ್ವಜನಿಕ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಮಂಗಳೂರು ವಿವಿ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ವಿರುದ್ಧ ಬೆಳುವಾಯಿಯ ಸೋಮನಾಥ ಕೋಟ್ಯಾನ್ ಮೂಡುಬಿದಿರೆ ಪೊಲೀಸ್ಠಾಣೆಗೆ ದೂರು ನೀಡಿರುತ್ತಾರೆ.
ಕಳೆದ ಆಗಸ್ಟ್ 30ರಂದು ನಾಗರಿಕ ಸಮಿತಿ ವತಿಯಿಂದ ಇಲ್ಲಿನ ರಾಜೀವಗಾಂಧಿ ವಾಣಿಜ್ಯ ಸಂಕೀರ್ಣ ಆವರಣದ ಎದುರು ‘ಕರಾವಳಿ ಜಿಲ್ಲೆಯಲ್ಲಿ ಸಂಘ ಪರಿವಾರ ಶಾಂತಿ ಕದಡುತ್ತಿದೆ ಎಂದು ಆರೋಪಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪಟ್ಟಾಭಿರಾಮ ಸೋಮಯಾಜಿ ‘ವಾಜಪೇಯಿ ಗೋಮಾಂಸ ತಿನ್ನುತ್ತಿದ್ದರು. ಗೋಮಾಂಸ ಅವರಿಗೆ ಇಷ್ಟವಾಗಿದ್ದರೆ ಸ್ವಾಮಿ ವಿವೇಕಾನಂದರಿಗೆ ಇಷ್ಟವಾಗದೆ ಇರುತ್ತದೆಯೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂ ಧಾಮರ್ಿಕ ಭಾವನೆಗೆ ಘಾಸಿ ಉಂಟುಮಾಡಿದ್ದಾರೆ. ಜನರ ನಂಬಿಕೆಗೆ ಅವಮಾನಗೊಳಿಸಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಗೆ ಪ್ರಚೋದನೆ ನೀಡಿದ ಸೋಮಯಾಜಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೋಮನಾಥ ಕೋಟ್ಯಾನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಅಜರ್ಿದಾರರಿಗೆ ನೀಡಿದ ಹಿಂಬರಹದಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *