ಕೈಕಂಬ: ಹಿಂದೂ ವಾರಿಯರ್ಸ್ ಗುಂಪಿನ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ವೇಳೆ ಕ್ರಾಡ್ಸ್ ಸಂವೇದದ 50 ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ ಹಾಗೂ ಕ್ರಾಡ್ಸ್ ಸಂವೇದನಾ ಸಂಸ್ಥೆಗೆ ಗ್ರೈಂಡರನ್ನು ಗುಂಪಿನ ವತಿಯಿಂದ ನೀಡಲಾಯಿತು.
13

6

2

3

4

9

7

1

12

ಈ ವೇಳೆ ಹಿಂದೂ ಸಂಸ್ಕøತಿಯನ್ನು ಬಿಂಬಿಸುವ ಧಾರ್ಮಿಕ ಹಬ್ಬ ಹಾಗೂ ಮಕ್ಕಳಿಗೆ ಕೆಲವೊಂದ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಆರ್ಥಿಕ ದುಸ್ಥಿತಿಯನ್ನು ಮನಗಂಡ ಗ್ರೂಪ್ ಸದಸ್ಯರು 1 ಕ್ವಿಂಟಾಲ್ ಅಕ್ಕಿಯನ್ನು ಪೂರೈಸಿದ್ದಾರೆ. ಹಿಂದೂ ವಾರಿಯರ್ಸ್  ಗ್ರೂಪ್ ನಲ್ಲಿ  ಸಹೋದರಿಯರನ್ನೊಳಗೊಂಡು 90 ಸದಸ್ಯರಿದ್ದು   ಈ ಗ್ರೂಪ್ನ  ಸಾದನೆಯು ನಾಲ್ಕೆ ತಿಂಗಳಲ್ಲಿ ಎಲ್ಲಾ ಹಿಂದೂ ಬಾಂದವರ ಮನಗೆದ್ದ  ಹಿಂದೂ ವಾರಿಯರ್ಸ್ ಗ್ರೂಪ್.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ   ದಕ್ಷಿಣ  ಕರ್ನಾಟಕ ಪ್ರಾಂತ ಸಂಚಾಲಕ ಭಜರಂಗಧಳ ಶರಣ್ ಪಂಪೈಲ್, ವಿಶ್ವ ಹಿಂದೂ ಪರಿಷತ್  ಜಿಲ್ಲಾಧ್ಯಕ್ಷ ಜೀತೇಂದ್ರ ಕೊಟ್ಟಾರಿ, ದುರ್ಗಾ ವಾಹಿನಿ ಜಿಲ್ಲಾಧ್ಯಕ್ಷೆ  ಸುರೇಖ ಮೇಡಂ, ಹಾಗೂ ಸಂಸ್ಥೆಯ ನಿರ್ವಾಹಕರಾದ ಭಗವಾನ್ ದಾಸ್ ಮುಂತಾದವರು ಮಾತಾಡಿ ಗ್ರೂಪ್‍ನ ಕಾರ್ಯವೈಖರಿಯನ್ನು ಹೊಗಳಿದರು.
ಸಾಮಾಜಿಕ ಸೇವೆಯಲ್ಲಿ ತೊಡಗಿರುವ ವಾಟ್ಸ್ಯಾಪ್ ಗ್ರೂಪ್‍ಗೆ ವಿಹಿಂಪ ಹಾಗೂ ಬಜರಂಗದಳದ ಸಂಪೂರ್ಣ ಸಹಕಾರವಿದೆ. ಇದರ ಏಳಿಗೆಗೆ ಸಹಕಾರ ನೀಡಲಾಗುವುದು. ಕೇವಲ ವಾಟ್ಸ್ಯಾಪ್‍ನಲ್ಲಿ ಹುಟ್ಟಿಕೊಂಡ ಗ್ರೂಪ್ ತನ್ನ ಸೇವಾ ಕೈಂಕರ್ಯದ ಮೂಲಕ ಜನಮನ್ನಣೆ ಗಳಿಸಲಿ ಎಂದು ಮುಖಂಡರು ಗ್ರೂಪ್‍ಗೆ ಹೊಸ ಹುರುಪನ್ನು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *