ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕೋರ್ಯ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಜರಗಿತು.

2015-16ನೇ ಸಾಲಿನಲ್ಲಿ ಅಭಿವೃದ್ಧಿಗಾಗಿ ಅನುದಾನ ಕೋರಿ ಅರ್ಜಿ ಸಲ್ಲಿಸಿದ ಧಾರ್ಮಿಕ ಸಂಸ್ಥೆಗಳ ಅರ್ಜಿಗಳನ್ನು ಪರಿಶೀಲಿಸಲಾಯಿತು. ಲಭ್ಯವಿರುವ ಅನುದಾನಕ್ಕೆ ಪಟ್ಟಿ ತಯಾರಿಸಿ ಹೆಚ್ಚುವರಿ ಅನುದಾನ ಮಂಜೂರಾತಿಗೆ ಸಂಬಂಧಪಟ್ಟವರನ್ನು ಕೋರಲು ನಿರ್ಣಯಿಸಲಾಯಿತು.
ಸಮಿತಿ ಸದಸ್ಯರಾದ ಯೂಸೂಫ್ ಕರಂದಾಡಿ, ಸದಾನಂದ ನಾವೂರು, ಅಸುಂತಮರಿಯ, ವಿಶ್ವನಾಥ ನಾೈಕ ನಿರ್ಬೈಲ್ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ ಉಪತಹಶೀಲ್ದಾರರಾದ ಭಾಸ್ಕರ್ ವಂದಿಸಿದರು.
