ಸುದ್ದಿ9 ಬಂಟ್ವಾಳ ;ತಾಲ್ಲೂಕಿನ ರಾಯಿ-ಅಣ್ಣಳಿಕೆ ರಸ್ತೆಯಲ್ಲಿ ತಾ.ಪಂ.ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ನೇತೃತ್ವದಲ್ಲಿ ಭಾನುವಾರ ಸಂಜೆ ನೂರಕ್ಕೂ ಮಿಕ್ಕಿ ಮಂದಿ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ಮೂಲಕ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರ ಮತಯಾಚನೆ ನಡೆಸಿದರು.

ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಮಧುಕರ ಬಂಗೇರ, ಉಪಾಧ್ಯಕ್ಷ ಆನಂದ ಪೂಜಾರಿ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಜಿ.ದಾಮೋದರ ಬಂಗೇರ, ಡೊಂಬಯ ಅರಳ, ರಾಘವ ಅಮೀನ್, ಪ್ರಶಾಂತ ಶೆಟ್ಟಿ, ಜಿ.ಸುಂದರ ಭಂಡಾರಿ, ಸಂತೋಷ್ ಕುಮಾರ್ ಬೆಟ್ಟು, ಎಂ. ದುರ್ಗದಾಸ್ ಶೆಟ್ಟಿ ಮತ್ತಿತರರು ಇದ್ದರು.
—

