ಪುತ್ತೂರು: ಭಂಡಾರಿ ಸಮಾಜ ಸಂಘ(ರಿ) ಪುತ್ತೂರು ಇದರ ಆಶ್ರಯದಲ್ಲಿ “ಆಟಿಡೊಂಜಿ ದಿನ” ಕಾರ್ಯಕ್ರಮವು ಆ.9ರಂದು ಭಾನುವಾರ ಕೇಶವ ಭಂಡಾರಿ ಕೈಪಾ ನಿವಾಸದಲ್ಲಿ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಸ್.ವಿ.ಎಸ್ ಕಾಲೇಜಿನ ಪ್ರೊಫೆಸರ್ ಶ್ರೀ ನಾರಾಯಣ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಂಡಾರಿ ಸಮಾಜ ಸಂಘದ ಕೇಶವ ಭಂಡಾರಿ ಅವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಭಂಡಾರಿ ಸಮಾಜ ಸಂಘ ಮಾಜಿ ಅಧ್ಯಕ್ಷ ಪ್ರಸ್ತುತ ಪುರಸಭಾ ಸದಸ್ಯ ಶ್ರೀ ವಿನಯ ಭಂಡಾರಿ ಪಾಂಗಳಾಯಿ, ಗೌರವಾಧ್ಯಕ್ಷ ಸುರೇಂದ್ರ ಭಂಡಾರಿ, ಕಾರ್ಯದರ್ಶಿ ಶ್ರೀ ಜಗದೀಶ್ ಭಂಡಾರಿ ಗೆಣಸಿನ ಕುಮೇರು, ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ವಸಂತ ಭಂಡಾರಿ, ಕಾರ್ಯದರ್ಶಿ ನಯನಾ ಜಗದೀಶ್ ಉಪಸ್ಥಿತರಿದ್ದರು.
DSC00766

DSC00705

DSC00706

DSC00709

DSC00710

DSC00711

DSC00712

DSC00715

DSC00716

DSC00719

DSC00722

DSC00727

DSC00728

DSC00749

DSC00753

DSC00760ಅಧ್ಯಕ್ಷರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಸ್ತುತ ಆಟಿ ಆಚರಣೆಯು ಆಡಂಬರವಾಗುತ್ತಿದೆ.ಇದು ಆ ರೀತಿ ಆಡಂಬರವಾಗಿರದೆ ಅದರ ಮಹತ್ವವನ್ನು ತಿಳಿಯುವ ಕಾರ್ಯಕ್ರಮವಾಗಬೇಕು ಎಂಬ ವಿಚಾರವನ್ನು ರವಾನಿಸಿದರು. ವಿನಯ ಭಂಡಾರಿ ಪಾಂಗಳಾಯಿ ಇವರು ಮಾತನಾಡುತ್ತಾ ಭಂಡಾರಿ ಸಮಾಜದ ಏಳಿಗೆ ಅತ್ಯವಶ್ಯಕವಾಗಿದೆ ಅದರ ಏಳಿಗೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ನುಡಿದರು. ಅಧ್ಯಕ್ಷರು ಮಾತನಾಡುತ್ತಾ ಹಣ ಮುಖ್ಯವಲ್ಲ ಹಣಕ್ಕಿಂತ ವಿಧ್ಯೆಯೇ ಮುಖ್ಯ ವಿಧ್ಯೆಯೊಂದಿದ್ದರೆ ಯಾವುದೇ ಕಷ್ಟ ಬಂದರು ಆ ಕಷ್ಟವನ್ನು ಎದುರಿಸಬಹುದೆಂದು ಅರ್ಥಗರ್ಬಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಲವು ಜಾನಪದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು ಬಹುಮಾನ ವಿಜೇತ ಭಂಡಾರಿ ಬಂಧುಗಳಿಗೆ ಅಧ್ಯಕ್ಷರು ಬಹುಮಾನವನ್ನು ವಿತರಿಸಿದರು. ಆಗಮಿಸಿದ ಎಲ್ಲಾ ಬಂಧುಗಳು ಹಲವು 40 ಬಗೆಯ ಖಾದ್ಯಗಳ ಸವಿಯನ್ನು ಸವಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಶ್ರೀ ಜಗದಿಶ್ ಗೆಣಸಿನ ಕುಮೇರು ಇವರು ಸ್ವಾಗತಿಸಿದರು. ಕುಮಾರಿ ಪ್ರಕೃತಿ ಕೆದಿಲ ಪ್ರಾರ್ಥಿಸಿದರು. ಶ್ರೀ ನವೀನ್ ಮೂಡಂಬೈಲು ವಂದಿಸಿದರು. ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಕುಮಾರಿ ಅಕ್ಷತಾ ಕೆದಿಲ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಜಗದೀಶ್ ಭಂಡಾರಿ ನರಿಮೊಗರು, ಮಹಾಬಲ ಭಂಡಾರಿ ಗೆಣಸಿನ ಕುಮೇರು, ಗಿರೀಶ್, ಪ್ರವೀಣ್ ಭಂಡಾರಿ ಪಾಂಗಳಾಯಿ, ಪ್ರಕಾಶ್.ಎನ್.ಕೆ., ಸತೀಶ್ ಭಂಡಾರಿ, ಕ್ಯಾಂಪ್ಕೋ ಮತ್ತು ಮಹಿಳಾ ಸಂಘದ ಶ್ರೀಮತಿ ಅನಿತಾ, ಶ್ರೀಮತಿ ವಿಜಯ ಭಂಡಾರಿ, ಶ್ರೀಮತಿ ಮಮತಾ, ಶ್ರೀಮತಿ ಶುಭ, ಶ್ರೀಮತಿ ಸರಿತಾ, ಶ್ರೀಮತಿ ಚೇತನಾ, ಶ್ರೀಮತಿ ಗೀತಾ, ಶ್ರೀಮತಿ ರಶ್ಮಿ, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *