ನಮ್ಮ ರಾಷ್ಟ್ರದ ಮೇರು ವ್ಯಕ್ತಿತ್ವದ ಡಾ. ಅಬ್ದುಲ್ ಕಲಾಂ ಅವರು ಸರ್ವಮಾನ್ಯರು, ಅಜಾತ ಶತ್ರು. ಅವರು ಜ್ಞಾನ ಮತ್ತು ವಿಜ್ಞಾನ ಎರಡರಲ್ಲೂ ಸಾಟಿ ಇಲ್ಲದಂತೆ ಮೆರೆದವರು. ಒಂದು ಕ್ಷಣವೂ ಪೋಲಾಗದಂತೆ ಹಾಗೂ ವ್ಯರ್ಥವಾಗದಂತೆ ಬದುಕಿದವರು.
ಅವರು ಆಯುಷ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡದಲ್ಲದೆ, ಸದುಪಯೋಗ ಪಡಿಸಿಕೊಂಡಿದ್ದಾರೆ. ಕನರ್ಾಟಕ ರಾಜ್ಯಕ್ಕೂ ಆಗಾಗ ಭೇಟಿ ಕೊಡುತ್ತಾ ಕನ್ನಡಿಗರ ಸ್ನೇಹಾಕಾಂಕ್ಷಿಗಳಾಗಿದ್ದರು.
ಶ್ರೀ ಕ್ಷೇತ್ರದ ಮೇಲೆ ಅವರಿಗೆ ವಿಶೇಷ ಅಭಿಮಾನ ಹಾಗೂ ಗೌರವನ್ನು ಹೊಂದಿದ್ದರು.
ಅವರ ನಿಧನದಿಂದ ಶತಮಾನದ ಶ್ರೇಷ್ಠ ವ್ಯಕ್ತಿಯೋರ್ವ ರನ್ನು ಕಳೆದುಕೊಂಡಿದ್ದೇವೆ.
ಡಿ. ವೀರೇಂದ್ರ ಹೆಗ್ಗಡೆಯವರು





