ಕಟೀಲು: ಜು.25: ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಸಂದರ್ಭದಲ್ಲಿ ಆಗಸ್ಟ್ ತಿಂಗಳಲ್ಲಿ ಕಟೀಲಿನಲ್ಲಿ ನಡೆಯಲಿರುವ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿ ಕಥಾಗೋಷ್ಠಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಆಯ್ಕೆಗಾಗಿ ಸಣ್ಣ ಕಥೆಗಳನ್ನು ಆಹ್ವಾನಿಸಲಾಗಿದೆ. ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಸಮ್ಮೇಳನದ ಕಥಾಗೋಷ್ಠಿಯಲ್ಲಿ ಕಥೆ ಓದಲುಆಯ್ಕೆಯಾಗಲಿರುವರು.
ಕಥೆಯು ಎ4 ಸೈಜಿನ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಏಳು ನಿಮಿಷದ ಒಳಗೆ ಓದುವಂತಿರಬೇಕು. ಪೂರ್ಣ ವಿಳಾಸ ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆ ತರಗತಿಗಳನ್ನು ನಮೂದಿಸಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ದೃಢೀಕರಣದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
ಸಂಚಾಲಕರು,ಸಣ್ಣಕಥಾ ವಿಭಾಗ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, `ಶ್ರೀಕೃಷ್ಣ
ಸಂಕೀರ್ಣ’, ಕೊಡಿಯಾಲ್ಬೈಲ್, ಮಂಗಳೂರು-3. ಮೊ: 9449030872 ದಿನಾಂಕ 5/8/2015ರ ಒಳಗೆ
ಕಳುಹಿಸಿಕೊಡಬೇಕು. ಕಥಯೊಂದಿಗೆ ಪಾಸ್ಪೊರ್ಟ್ ಗಾತ್ರದ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯನ್ನು
ನಮೂದಿಸಿರಬೇಕು.
