ಸುದ್ದಿ9ಬಂಟ್ವಾಳ : ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಕ್ತವಾಗಿ ಜೀವಿಸುವ ಸನ್ನಿವೇಶ ನಿಮರ್ಾಣವಾದಾಗ ಮಾತ್ರ ಪ್ರಜಾಪ್ರಭುತ್ವ ಸಿದ್ದಾಂತ ಸಾರ್ಥಕವಾಗುವುದು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯಥರ್ಿ ಕೆ ಎನ್ ಸೋಮಶೇಖರ್ ಅಭಿಪ್ರಾಯಪಟ್ಟರು. ಮಂಗಳವಾರ ಬಿ ಸಿ ರೋಡಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಾದ್ಯಂತ ಅರಣ್ಯಗಳು ಸರ್ವನಾಶವಾಗುತ್ತಿದ್ದರೂ ಅರಣ್ಯ ಸಚಿವ ಬಿ ರಮಾನಾಥ ರೈ ಜಿಲ್ಲೆಯಲ್ಲಿ ಪಕ್ಷ ರಾಜಕೀಯ ನಡೆಸುತ್ತಾ ಹಾಯಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಪ್ರಸ್ತುತ 13000 ಕೋಟಿ ವೆಚ್ಚದ ಜನವಿರೋಧಿ ಎತ್ತಿನ ಹೊಳೆ ಯೋಜನೆಗೆ ಅರಣ್ಯ ಸಚಿವರ ಸಹಿ ಇಲ್ಲದೆ ಶಂಕು ಸ್ಥಾಪನೆ ಸಾಧ್ಯವಿಲ್ಲದಾಗಿದ್ದು, ಈ ಯೋಜನೆಯ ಶಂಕುಸ್ಥಾಪನೆಗೆ ಅರಣ್ಯ ಸಚಿವ ರಮಾನಾಥ ರೈ ನೇರ ಕಾರಣ ಎಂದ ಸೋಮಶೇಖರ್ ಮೈಸೂರು-ಇಳವಾಲದಿಂದ ಕೇರಳದ ಕೋಝಿಕ್ಕೋಡ್ ಎರಡು ಗಿರಿಜನ ಕಾಲನಿಗಳಿಗೆ 24 ಗಂಟೆ ವಿದ್ಯುದ್ದೀಕರಣದ ಹೆಸರಿನಲ್ಲಿ ಹಿಡನ್ ಅಜೆಂಡಾ ಇಟ್ಟು ನಡೆಸಲಾಗುತ್ತಿರುವ ರಾಜೀವ್ ಗಾಂಧಿ ವಿದ್ಯುದ್ದೀಕರಣ ಯೋಜನೆಗೆ 400 ಕಿಲೋ ವ್ಯಾಟ್ನ ಹೈಟಡನ್ಶನ್ ತಂತಿ ಮಡಿಕೇರಿಯ ಎಕ್ರೆಗಟ್ಟಲೆ ಕಾಡಿನಿಂದ 119 ಕಿ ಮೀ ವಿಸ್ತೀರ್ಣದಲ್ಲಿ ಹಾದು ಹೋಗುತ್ತಿದ್ದು, ಇದಕ್ಕಾಗಿ ಸುಮಾರು 50,000 ಸಾವಿರ ಜೀವಂತ ಮರಗಳ ಮಾರಣಹೋಮವಾಗುತ್ತಿದೆ. ಹೀಗಿದ್ದರೂ ನಮ್ಮ ಅರಣ್ಯ ಸಚಿವರು ಮಗುಮ್ಮಾಗಿಯೇ ಮಲಗಿದ್ದಾರೆ ಎಂದವರು ವಾಗ್ದಾಳಿ ನಡೆಸಿದರು. ಇಂದು ರಾಜಕಾರಣಿಗಳು ಬ್ರೋಕರ್ಗಳಾಗಿ ಕೆಲಸ ನಿರ್ವಹಿಸುತ್ತಿದ್ದು, ರಿಯಲ್ ಎಸ್ಟೇಟ್ ಮಾಲಿಕರ ಕೈಗೊಂಬೆಗಳಾಗಿ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿಮರ್ಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸೋಮಶೇಖರ್ ಇವತ್ತು ಚುನಾವಣೆಗಳು ವಿಷಯಾಧಾರಿತವಾಗಿ ನಡೆಯದೆ ವ್ಯಕ್ತಿಯಾಧಾರಿತ ಹಾಗೂ ಕೋಮು ಆಧಾರಿತವಾಗಿ ನಡೆಯುತ್ತಿರುವುದು ತೀರಾ ವಿಷಾದನೀಯ. ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ‘ಪರಿಸರ’ ಯಾವುದೇ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲೂ ಸ್ಥಾನ ಪಡೆದುಕೊಂಡಿಲ್ಲ ಎಂದವರು ಖೇದ ವ್ಯಕ್ತಪಡಿಸಿದರು. ಪರಿಸರ ಸ್ನೇಹಿಯಾಗಿ ಹೋರಾಟ ನಡೆಸುವ ಮಂದಿಯನ್ನು ಈ ಬ್ರೋಕರ್ ರಾಜಕಾರಣಿಗಳು ಇಂದು ಭಯೋತ್ಪಾದಕರಂತೆ ಕಾಣುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಏಕೈಕ ಪರಿಸರ ಅಭ್ಯಥರ್ಿಯ ರೂಪದಲ್ಲಿ ಪಕ್ಷೇತರ ಅಭ್ಯಥರ್ಿಯಾಗಿ ಕಣಕ್ಕಿಳಿದಿದ್ದು, ಚುನಾವಣೆಯನ್ನು ರಾಜಕೀಯ ಪಕ್ಷಗಳ ಪರಿಸರ ವಿರೋಧಿ ಧೋರಣೆಗಳ ವಿರುದ್ದ ಪ್ರತಿಭಟನೆಯಾಗಿ ಪರಿಗಣಿಸಿದ್ದೇನೆ. ಉಳಿದೆಲ್ಲಾ ಪಕ್ಷಗಳು ಪರಿಸರ ವಿರೋಧಿ ಯೋಜನೆಗಳನ್ನು ಕಾರ್ಯಗತಗೊಳಿಸಿ ಪರಿಸರದ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯೇ ನನ್ನ ಚುನಾವಣಾ ವಿಷಯವಾಗಲಿದೆ ಎಂದ ಸೋಮಶೇಖರ್ ಅವರು ಧಾರಣಾ ಸಾಮಥ್ರ್ಯ ಮೀರಿದ ಯೋಜನೆಗಳು ಪರಿಸರಕ್ಕೆ ಮಾರಕ. ಇಂತಹ ಯೋಜನೆಗಳು ಜಿಲ್ಲೆಯ ಅಭಿವೃದ್ದಿಗೆ ಪೂರಕವಲ್ಲ. ಈ ನಿಟ್ಟಿನಲ್ಲಿ ಇವುಗಳನ್ನು ನಾವೆಲ್ಲ ಒಕ್ಕೊರಳಿನಿಂದ ಖಂಡಿಸಬೇಕಾಗಿದೆ. ನಮ್ಮ ಈ ಪರಿಸರ ಪ್ರೇಮಿ ಹೋರಾಟ ಚುನಾವಣೆಗೆ ಮಾತ್ರ ಸೀಮಿತವಾಗದೆ ನಿತ್ಯ ನಿರಂತರವಾಗಿರಲಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಧರಣಿ ಮಂಡಲ ಬಳಗದ ಸಿ ಯತಿರಾಜ್ ಹಾಗೂ ಪರಿಸರ ಹೋರಾಟಗಾರ ನಾಗೇಶ ಅಂಗೀರಸ ಉಪಸ್ಥಿತರಿದ್ದರು. ಸುದ್ದಿಗೋಷ್ಠಿಯಲ್ಲಿ ಪಕ್ಷೇತರ ಅಭ್ಯಥರ್ಿ ಸೋಮಶೇಖರ್ ಮಾತನಾಡಿದರು
