ಕೈಕಂಬ: ಭಾರತ ಮಾತಾ ಸೇವಾ ಸಮಿತಿ ಗುರುಪುರ ಕೈಕಂಬ ಇದರ ವತಿಯಿಂದ 16ನೇ ವರ್ಷದ ಕಾರ್ಗಿಲ್ ವಿಜಯ ದಿವಸವನ್ನು ಜು.26ರಂದು ಭಾನುವಾರ ಸಾಯಂಕಾಲ 5 ಗಂಟೆಗೆ ಕಿನ್ನಿಕಂಬಳ ರಾಧಕೃಷ್ಣಭಜನಾ ಮಂದಿರದಲ್ಲಿ ಜರಗಲಿದೆ.
ಆ ಪ್ರಯುಕ್ತ ಕಾರ್ಗಿಲ್ ಸಮರದಲ್ಲಿ ಹುತಾತ್ಮರಾದ ಮತ್ತು ಭಾಗವಹಿಸಿದ ವೀರ ಯೋಧರನ್ನು ಸ್ಮರಿಸಿ, ಗೌರವಿಸಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಕಾರ್ಯಕ್ರಮ ನಡೆಯಲಿದೆ.
ಕಟೀಲು ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಸೋಂದಾ ಭಾಸ್ಕರ ಭಟ್ ಉಪನ್ಯಾಸ ನೀಡಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಭಾಗವಹಿಸುವರು ಎಂದು ಭಾರತ ಮಾತಾ ಸೇವಾ ಸಮಿತಿಯ ಪ್ರಕಟನೆ ತಿಳಿಸಿದೆ.

