ಬಂಟ್ವಾಳ : ರಂಗಧ್ವನಿ ಬಂಟ್ವಾಳ ಕಲಾ ತಂಡ ಇದರ ದ್ವಿತೀಯ ನಾಟಕ ಏತುಂಡಾ ಆತೇ ತುಳು ನಾಟಕದ ಮುಹೂರ್ತ ಕಾರ್ಯಕ್ರಮ ಬಂಟ್ವಾಳ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನದಲ್ಲಿ ಜರಗಿತು.

ಶ್ರೀ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಮುಹೂರ್ತ ಕಾರ್ಯಕ್ರಮ ನಡೆಯಿತು. ಚಲನಚಿತ್ರ ನಟ ಬಿ. ಚೇತನ್ ರೈ ಮಾಣಿ ಅವರು ಭಾಗವಹಿಸಿ ಕಲಾವಿದರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಾಟಕ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ, ನಾಟಕ ಕರ್ತ ವಿ.ಎನ್.ಕುಲಾಲ್ ವೇಣೂರು, ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ರಮೇಶ್ ಕಲ್ಲಡ್ಕ , ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ, ರಂಗ ನಿರ್ವಹಕ ದಾಮೋದರ ಕುರಿಯಾಳ, ಸಂಗೀತ ನಿರ್ದೆಶಕ ರಾಜಶೇಖರ ಶೆಟ್ಟಿ , ಪ್ರಮುಖರಾದ ಜಗನ್ನಾಥ ಕೆ. ಬಂಟ್ವಾಳ, ಬಂಟ್ವಾಳ ಕೇಬಲ್ ನೆಟ್ವರ್ಕ್ ನ ಸುರೇಶ್, ಗಿರೀಶ್ ಪೈ ಬಂಟ್ವಾಳ, ರಂಗಕಲಾವಿದ ಚಂದಪ್ಪ ಅಂಚನ್ ಮತ್ತು ತಂಡದ ಇತರ ಕಲಾವಿದರು ಉಪಸ್ಥಿತರಿದ್ದರು.
