ಮೂಡುಬಿದರೆ: ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಬೆಂಗಳೂರಿನ ಶ್ವಾಸ ಕೇಂದ್ರದ ಯೋಗಗುರು ಶ್ರೀ ವಚನಾನಂದ ಸ್ವಾಮೀಜಿ ಗುರುವಾರ ಸ್ವಸ್ತಿಶ್ರೀ ಪ.ಪೂ ಕಾಲೇಜಿನ ವಿದ್ಯಾಥರ್ಿಗಳಿಗೆ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಮೊದಲಿಗೆ ಧ್ಯಾನದ ವಿಧಾನ, ಮಹತ್ವವನ್ನು ವಿವರಿಸಿದರು.
mbd_july23_2 (3)

mbd_july23_2 (1)

mbd_july23_2 (2)

ಬಳಿಕ ಮಾತನಾಡಿದ ಸ್ವಾಮೀಜಿ, ಬುದ್ಧ ಹಾಗೂ ಮಹಾವೀರ ಧ್ಯಾನದ ಮೂಲಕ ಆಧ್ಮಾತಿಕತೆಯನ್ನು ಸಾಧಿಸಿದ್ದಾರೆ. ಯೋಗವನ್ನು ಮಾಡುವುದರಿಂದ ನಮ್ಮ ಮನಸ್ಸು, ಶರೀರ ಶುದ್ಧವಾಗಿರುತ್ತದೆ. ಹೆಚ್ಚು ಮಾತನಾಡುವ ಬದಲು ಚಿಂತನೆ ಮಾಡಿ ಮಾತನಾಡಿದರೆ ಉತ್ತಮ. ಸಾವಿರ ಕಂಬದ ಬಸದಿಯಂತಹ ಆಧ್ಯಾತ್ಮಿಕ ಹಾಗೂ ಧಾಮರ್ಿಕ ವಾತಾವರಣದಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದರು.

ಮೂಡುಬಿದರೆ ಶ್ರೀ ಜೈನಮಠದ ಭಟ್ಟಾರಕ ಚಾರುಕೀತರ್ಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ವಚನಾನಂದ ಸ್ವಾಮೀಜಿಯನ್ನು ಗೌರವಿಸಿದರು.
ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ವಕೀಲ ಕೆ.ಆರ್ ಪಂಡಿತ್, ಬಸದಿಗಳ ಮೊಕ್ತೇಸರರಾದ ಆನಡ್ಕ ದಿನೇಶ್ ಕುಮಾರ್, ಪಟ್ನ ಶೆಟ್ಟಿ ಸುಧೇಶ್ ಕುಮಾರ್, ನಿವೃತ್ತ ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆ ಮೊದಲಾದವರಿದ್ದರು.
ಸ್ವಸ್ತಿಶ್ರೀ ಪ.ಪೂ ಕಾಲೇಜಿನ ಪ್ರಭರ ಪ್ರಾಂಶುಪಾಲೆ ಸೌಮ್ಯ ಸ್ವಾಗತಿಸಿದರು. ನೇಮಿರಾಜ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *