ಮೂಡುಬಿದರೆ: ಜುಲೈ13: ಇಲಾಖೆಗಳ ನಡಿಗೆ ರೈತರ ಮನೆಬಾಗಿಲಿಗೆ ಮೂಡುಬಿದಿರೆ ವಲಯ ಮಟ್ಟದ ಕೃಷಿ ಅಭಿಯಾನವು ಭಾನುವಾರ ಸಮಾಜಮಂದಿರದಲ್ಲಿ ಸಂಪನ್ನಗೊಂಡಿತು.
ಸಮಾರಂಭದಲ್ಲಿ ಸಚಿವ ಅಭಯಚಂದ್ರ ಜೈನ್ ಸವಲತ್ತುಗಳನ್ನು ವಿತರಿಸಿ ಮಾತನಾಡುತ್ತಾ, ಕೃಷಿಕರು ಕಡಿಮೆ ಜಾಗದಲ್ಲಿ ಹೆಚ್ಚು ಆದಾಯಗಳಿಸುವಂತಾಗಬೇಕಾದರೆ ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ಸಕರ್ಾರವು ರೈತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಬಿಜೋಪಚಾರದ ಕುರಿತು ಮಾತನಾಡಿದರು. ರೈರ ಸಮಸ್ಯೆಗಳ ಕುರಿತು ಸಂವಾದ ಹಾಗೂ ತಾಂತ್ರಿಕ ಮಾಹಿತಿಯನ್ನು ನೀಡಲಾಯಿತು. ರೇಷ್ಮೆ ಇಲಾಖೆಯಿಂದ ಶೇ.75ರ ಸಹಾಯನದಲ್ಲಿ ಲಕ್ಷ್ಮೀ ಪೂಜಾತರ್ಿಯವರಿಗೆ ಸೋಂಕುನಿವಾರಕ ಯಂತ್ರ, ಶಿತರ್ಾಡಿಯ ದ್ವಿತಳಿ ರೇಶ್ಮೆ ಬೆಳೆಗಾರ ಮಂಜುನಾಥ ಶೇಟ್ ಅವರಿಗೆ 3750 ಬೋನಸ್, ಶ್ರೀನಿವಾಸ ಪ್ರಾಂತ್ಯ ಹಾಗೂ ರುಕ್ಕಯ್ಯ ಬಡಗಮಿಜಾರು ಅವರಿಗೆ ಪವರ್ ಟಿಲ್ಲರ್ ವಿತರಿಸಲಾಯಿತು.

ಮೂಡುಬಿದರೆ ಪುರಸಭಾ ಅಧ್ಯಕ್ಷೆ ರೂಪಾ ಶೆಟ್ಟಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಮೂಡುಬಿದರೆ ವಲಯ ರೈತಸಂಘದ ಅಧ್ಯಕ್ಷ ಧನಕೀತರ್ಿ ಬಲಿಪ, ಕೃಷಿ ಇಲಾಖೆಯ ಉಪನಿದರ್ೇಶಕ ಮುನೇಗೌಡ, ಬ್ರಹ್ಮಾವರ ಪ್ರಾದೇಶಿಕ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಧನಂಜಯ, ಕೃಷಿ ಇಲಾಖೆಯ ಸಹಾಯಕ ನಿದರ್ೇಶಕರಾದ ನಾಗರಾಜ್, ಅಬ್ದುಲ್ ಬಶೀರ್, ತೋಟಕಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಕಾರಿ ಸುಕುಮಾರ ಹೆಗ್ಡೆ, ರೇಶ್ಮೆ ವಲಯಾಕಾರಿ ಬಿ.ಕೆ,ನಾಯಕ್, ಕೃಷಿ ಸಹಾಯಕ ಅಕಾರಿ ನರಸಿಂಹ, ಅಕಾರಿಗಳಾದ ಜಯರಾಜ್, ವಿ.ಎಸ್.ಕುಲಕಣರ್ಿ ಮತ್ತಿತರರು ಉಪಸ್ಥಿತರಿದ್ದರು.
ಕೃಷಿ ಅಭಿಯಾನದ ಅಂಗವಾಗಿ ಹೋಬಳಿಯ ಬೆಳುವಾಯಿ, ದರೆಗುಡ್ಡೆ, ವಾಲ್ಪಾಡಿ, ಶಿತರ್ಾಡಿ, ಇರುವೈಲು, ಹೊಸಬೆಟ್ಟು, ತೆಂಕಮಿಜಾರು, ಕಲ್ಲಮುಂಡ್ಕೂರು, ಪಾಲಡ್ಕ, ಪುತ್ತಿಗೆಗಳಲ್ಲಿ ಸಂಚಾರಿ ಮಾಹಿತಿ ಘಟಕದ ಮೂಲಕ ಮಾಹಿತಿ ನೀಡಲಾಯಿತು.
..
