ಮೂಡುಬಿದರೆ: ನಾನು ಎಂಬುದು ಕಳೆದು ನಾವು ಎಂಬುದು ಒಡಮೂಡಿದಾಗ ಸಾಂಘಿಕ ಚಟುವಟಿಕೆಗಳು ಅರ್ಥಪೂರ್ಣವೆನಿಸುತ್ತವೆ” ಎಂದು ಹಿರಿಯ ಲೆಕ್ಕ ಪರಿಶೋಧಕರಾದ ಎಸ್.ಎಸ್. ನಾಯಕ್ ಹೇಳಿದರು.
ಕಲ್ಲಬೆಟ್ಟು ಎಕ್ಸಲೆಂಟ್ ಪ.ಪೂ. ಕಾಲೇಜಿನ ವಾರ್ಷಿಕಾಂಕ ‘ಮೌಲ್ಯ’ವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

DSC_0456

mbd_july11_2 (1)

1
ಓಮನ್ ಬ್ಯಾಂಕಿನ ತರಬೇತಿ ನಿರ್ದೇಶಕ ಡಾ. ಕೆ. ರಾಜೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಆತ್ಮವಿಶ್ವಾಸದಿಂದ, ಪರಿಶ್ರಮ ಪಟ್ಟಲ್ಲಿ ಯಶಸ್ಸು ಖಚಿತವೆಂದು ಅಭಿಪ್ರಾಯಪಟ್ಟರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಸುರೇಶ್ಬಾಬು, ಹಿಂದಿ ವಿಭಾಗದ ದಯಾವತಿ, ವಾಣಿಜ್ಯ ವಿಭಾಗದ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರಚನಾ ಡಿ. ಸ್ವಾಗತಿಸಿದರು. ಹಿತೈಷಿ ಕಾರಂತ್ ವಂದಿಸಿದರು. ಭೂಮಿಕಾ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *