ಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನಿಂದ ಮುಂಬಯಿಗೆ ಸಂಚರಿಸುತ್ತಿದ್ದ ಐರಾವತ ವಿಲಾಸಿ ಬಸ್ಸನ್ನು ಸ್ಥಗಿತಗೊಳಿಸದಂತೆ ದ.ಕ ಜಿಲ್ಲಾ ಸಾಹಿತ್ಯ ಪರಿಷ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಕೆಎಸ್‍ಆರ್‍ಟಿಸಿ ಮಂಗಳೂರು ವಿಭಾಗಾಧಿಕಾರಿ, ದ.ಕ.ಜಿಲ್ಲಾಧಿಕಾರಿ, ಮುಖ್ಯಮಂತ್ರಿ, ಸಾರಿಗೆ ಸಚಿವ, ಆರೋಗ್ಯ ಸಚಿವ ಮುಂತಾದವರಿಗೆ ಬರೆದ ಪತ್ರದಲ್ಲಿ ಅವರು ಇದನ್ನು ಉಲ್ಲೇಖಿಸಿದ್ದಾರೆ.
ks
ಐರಾವತ ಬಸ್ ರಾಷ್ಟ್ರದಲ್ಲಿಯೇ ಆಧುನಿಕ ತಂತ್ರಜ್ಞಾನವುಳ್ಳ ವಿಶೇಷ ಸೌಲಭ್ಯಗಳುಳ್ಳ ಬಸ್ ಆಗಿದ್ದು, ದೇಶದ ನಾನಾ ಕಡೆ ಸಂಪರ್ಕ ಕಲ್ಪಿಸುತ್ತಿದೆ. ರಾಜ್ಯ ಸರಕರಾದ ಅಂಗ ಸಂಸ್ಥೆಯಾಗಿರುವ ಕೆ.ಎಸ್.ಆರ್.ಟಿ.ಸಿ. ಜನಸಾಮಾನ್ಯರ ಮೂಲಭೂತ ಸೌಕರ್ಯವಾದ ಸಾರಿಗೆ ಸೌಲಭ್ಯವನ್ನು ನೀಡಬೇಕಾಗಿರುವುದು ಸರಕಾರದ ಕರ್ತವ್ಯ. ಆದ್ದರಿಂದ ಐರಾವತ ಬಸ್ ಸ್ಥಗಿತ ತರವಲ್ಲ. ಖಾಸಗಿ ಸಂಸ್ಥೆಗಳು ವಿಲಾಸಿ ಬಸ್‍ಗಳನ್ನು ನಡೆಸುತ್ತಿರುವಾಗ ಸರಕಾರದ ಆಡಳಿತದಲ್ಲಿರುವ ಕೆ.ಎಸ್.ಆರ್.ಟಿ.ಸಿಗೆ ಯಾಕೆ ವಿಲಾಸಿ ಬಸ್‍ಗಳನ್ನು ಮುನ್ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಜಿಜ್ಞಾಸೆ ಮೂಡುತ್ತದೆ. ಕೆ.ಎಸ್.ಆರ್.ಟಿ.ಸಿ. ಗ್ರಾಮಾಂತರ ಪ್ರದೇಶದ ಜನತೆಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ. ಆದ್ದರಿಂದ ಮಂಗಳೂರು ಮುಂಬೈ ಐರಾವತ ಬಸ್ಸುಗಳನ್ನು ಇನ್ನೂ ಉತ್ತಮ ಸೌಲಭ್ಯಗಳೊಂದಿಗೆ ಮುಂದುವರಿಸಬೇಕು ಎಂದು ಕಲ್ಕೂರ ಸರಕಾರಕ್ಕೆ ಆಗ್ರಹಿಸಿದ್ದಾರೆ.

By Suddi9

Leave a Reply

Your email address will not be published. Required fields are marked *