ಬಜ್ಪೆ: ಬೈಕ್ ಗಳೆರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮತ್ತೊಂದು ಬೈಕ್ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪೊಳಲಿ ದ್ವಾರದ ಸಮೀಪದ ಬೆಳ್ಳಿಗುತ್ತು ಎಂಬಲ್ಲಿ ಜು.2ರಂದು ಸಂಜೆ 5ರ ಸುಮಾರಿಗೆ ನಡೆದಿದೆ.
ಲಾನ್ಸಿ ಹೆರಿ ಸಿಕ್ವೆರಾ ಅವರು ಸಹಸವಾರ ಸುರೇಂದ್ರ ಎಂಬವರೊಂದಿಗೆ ಗುರುಪುರ ಕೈಕಂಬ ಸಮೀಪದ ಬೆಳ್ಳಿಗುತ್ತು ಎಂಬಲ್ಲಿ ಉಳಾಯಿಬೆಟ್ಟುವಿಗೆ ಹೋಗುತ್ತಿದ್ದರು. ಈ ವೇಳೆ ಗುರುಪುರ ಕಡೆಯಿಂದ ಬಂದ ಬೈಕ್ ಅತಿವೇಗದಿಂದ ವಿರುದ್ಧ ದಿಕ್ಕಿನಲ್ಲಿ ಬಂದು ಲಾನ್ಸಿಯವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ನಲ್ಲಿದ್ದ ಲಾನ್ಸಿ ಹೆರಿ ಸಿಕ್ವೆರಾ ಹಾಗೂ ಸುರೇಂದ್ರ ಅವರು ಬೈಕ್ನಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಾಳುಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
