ಮೂಡುಬಿದಿರೆ: ಮಳೆಯಿರಲೀ, ಮಳೆ ಬಾರದಿರಲಿ ಮೂಡುಬಿದರೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ವಿದ್ಯುತ್ ವ್ಯತ್ಯಯ ಸಹಿತ ವಿದ್ಯುತ್ ಸಂಬಂಧಿಸಿದ ಹಲವಾರು ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಕೆಲವಡೆ ವಿದ್ಯುತ್ ಕಂಬ ಹಾಗೂ ತಂತಿಗಳು ಧರೆಶಾಹಿಯಾಗುವ ಹಂತದಲ್ಲಿದ್ದು ಜನರು ಪ್ರಾಣಾಪಾಯದಲ್ಲಿದ್ದಾರೆ.
ಪುರಸಭೆಯ ಕೋಟೆಬಾಗಿಲು, ಪುಚ್ಚೆಮೊಗರು, ಅಲಂಗಾರು, ಮಾರುರು ಸಹಿತ ಹಲವಾರು ಪ್ರದೇಶಗಳಲ್ಲಿ ವಿವಿದೆಡೆ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶವಾದ ಹೊಸಬೆಟ್ಟು, ಇರುವೈಲು, ಪುತ್ತಿಗೆ ಸಹಿತ ವಿವಿಧೆಡೆಗಳಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ.

ಬಾಗಿದ ಕಂಬ:
ಪುರಸಭೆ ವ್ಯಾಪ್ತಿಯ ಕೋಟೆಬಾಗಿಲು ಹಾಗೂ ಪ್ರಾಂತ್ಯ ಗ್ರಾಮವನ್ನು ಸಂಪರ್ಕಿಸುವ ಮೌಲನ ಅಝಾದ್ ರಸ್ತೆಯಲ್ಲಿ ಕಂಬ ಸಂಖ್ಯೆ -ಟಿಎಂಸಿ 11/147 ಕಂಬಕ್ಕೆ ಮರದ ಗೆಲ್ಲೊಂದು ವಾರದ ಹಿಂದೆ ಬಿದ್ದಿದೆ. ತಂತಿ ಜೋತು ಬಿದ್ದಿದ್ದು ಮಾತ್ರವಲ್ಲದೆ ಕಂಬ ರಸ್ತಯ ಮಧ್ಯಕ್ಕೆ ಬಾಗಿ ಬೀಳುವ ಸ್ಥಿತಿಯಲ್ಲಿದೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ಬಂದಿದ್ದರೂ, ತುರ್ತು ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ಯಾವುದಾದರೂ ತೊಂದರೆಯಾದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳೇ ಹೊಣೆ ಎಂದು ಸ್ಥಳೀಯರ ಪರವಾಗಿ ಸಾಮಾಜಿಕ ಹೋರಾಟಗಾರ ಎಂ.ರಮೇಶ್ ಬೋಧಿ ತಿಳಿಸಿದ್ದಾರೆ.
ತಿಂಗಳಿನಿಂದ ಕರೆಂಟಿಲ್ಲ:
ಹೊಸಬೆಟ್ಟು ಹಾಗೂ ಇರುವೈಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯವಿದ್ದು, ತಿಂಗಳಿನಿಂದ ಸರಿಯಾಗಿ ಕರೆಂಟಿಲ್ಲ. ಇದರಿಂದ ಗೃಹಿಣಿಯರು, ವಿದ್ಯಾರ್ಥಿಗಳು ಸಹಿತ ಎಲ್ಲರೂ ಸಮಸ್ಯೆ ಎದುರಿಸುವಂತಾಗಿದೆ ಎಂದು ಇರುವೈಲು ಪಂಚಾಯಿತಿ ಹಿರಿಯ ಸದಸ್ಯೆ ವಲೇರಿಯನ್ ಕುಟಿನ್ಹಾ ತಿಳಿಸಿದ್ದಾರೆ.
ದಾರಿಗೆ ಬಿದ್ದ ತಂತಿ:
ಮೂಡುಬಿದರೆ-ಬಂಟ್ವಾಳವನ್ನು ಸಂಪಕರ್ಿಸುವ ಪುಚ್ಚೆಮೊಗರು ಸೇತುವೆ ಬಳಿಯಿರುವ ಟ್ರಾನ್ಸ್ಫಾರ್ ಜೀಣರ್ಾವಸ್ಥೆಯಲ್ಲಿದ್ದು, ವಿದ್ಯುತ್ ತಂತಿಗಳು ತುಂಡಾಗಿ ದಾರಿಗೆ ಬಿದ್ದಿದೆ. ಮೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಲ್ಲಲ್ಲಿ ವಿದ್ಯುತ್ ತಂತಿಗಳು ಕೆಳಗೆ ಬೀಳುವ ಸ್ಥಿತಿಯಲ್ಲಿದೆ. ಇದರಿಂದ ಯಾವುದಾದರೂ ಪ್ರಾಣಹಾನಿ ಸಂಭವಿಸಿದರೆ ಮೆಸ್ಕಾಂನವರೇ ಹೊಣೆ ಎಂದು ಗ್ರಾಮಸ್ಥರ ಪರವಾಗಿ ಬಿ.ರಾಜರಾಂ ಅಡ್ಯಂತಾಯ ತಿಳಿಸಿದ್ದಾರೆ.
ಕಾಡಿದ ಮುಷ್ಕರ:
ವಿದ್ಯುತ್ ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿ ಸರ್ಕಾರ ಜಾರಿಗೆ ತಂದ ಹೊಸ ನಿಯಮವನ್ನು ವಿರೋಧಿಸಿ ವಿದ್ಯುತ್ ಗುತ್ತಿಗೆದಾರರ ಮೂಡುಬಿದರೆಯಲ್ಲಿ ಮುಷ್ಕರ ಆರಂಬಿಸಿರುವುದರಿಂದ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸುವಲ್ಲಿಯೂ ಮೆಸ್ಕಾಂನವರಿಗೆ ಸಾಧ್ಯವಾಗುತ್ತಿಲ್ಲ. ಮೆಸ್ಕಾಂ ಸಿಬ್ಬಂದಿಗಳ ಕೊರೆತೆಯೂ ಕೂಡ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಿನ್ನಡೆಯನ್ನು ಉಂಟು ಮಾಡಿದೆ.
