ವಾಮಂಜೂರು: ಶಾಂತಿವನ ಟ್ರಸ್ಟ್ (ರಿ) ಧರ್ಮಸ್ಥಳ, ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು, ಮಂಗಳ ಜ್ಯೋತಿ ನಿರಂತರ ಯೊಗ ಕೇಂದ್ರ ವಾಮಂಜೂರು, ಯೋಗಾಸ್ತಕರ ಬಳಗ, ಕುಡುಪು, ವಾಮಂಜೂರು, ಗುರುಪುರ, ಮೂಡುಶೆಡ್ಡೆ, ಇವರ ಸಹಯೋಗದಲ್ಲಿ “ವಿಶ್ವ ಯೋಗ ದಿನಾಚರಣೆ”-2015′ ನ್ನು ಜೂ.21 ಭಾನುವಾರರಂದು ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇಲ್ಲಿ ಆಚರಿಸಲಾಯಿತು.


ಕುಡುಪು, ವಾಮಂಜೂರು, ಗುರುಪುರ, ಮೂಡುಶೆಡ್ಡೆ, ವ್ಯಾಪ್ತಿಯ ಸುಮಾರು 500ಕ್ಕೂ ಹೆಚ್ಚು ಮಂದಿ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ವಿಶೇಷ ಸಾಮಥ್ರ್ಯವುಳ್ಳ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರುಗು ನೀಡಿದರು.
ಶಾಲಾ ಕ್ರೀಂಡಾಗಣದಲ್ಲಿ ನಡೆದ ಯೋಗ ಕಾರ್ಯಕ್ರಮ ನಡೆದು ಸಭಾಂಗಣದಲ್ಲಿ ತಾಲೂಕು ಪಂಚಾಯಿತಿನ ಮಾಜಿ ಅಧ್ಯಕ್ಷರಾದ ಹರೀಶ್ ಕುಮಾರ್, ಸಮಾಜಸೇವಕರಾದ ರಮಾನಾಥ ಅತ್ತುರ್ , ಯಶವಂತ ಕೋಟ್ಯಾನ್, ರಮೇಶ್ ಕಾಳಗಿ, ರವಿ ಕುಮಾರ್ ಗುರುಪುರ, ಅಜಯ್ ಮಂಗಳನಗರ, ಅಶೋಕ್ ಕುಮಾರ್, ಅವಂತಿ ಸುಖಲತಾ ಇವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತಾಧಿಕಾರಿಗಳಾದ ಗಣೇಶ್ ಭಟ್.ವಿ ಇವರು ವಹಿಸಿದ್ದರು.
ವಿಶ್ವ ಮಟ್ಟದಲ್ಲಿ ಯೋಗಕ್ಕೆ ಬಹು ಅವಿಸ್ಮರಣೀಯ ಸ್ಥಾನಮಾನ ದೊರಕಿರುವ ಈ ಸಂದರ್ಭವನ್ನು ಎಲ್ಲಾ ಗಣ್ಯರು ಶ್ಲಾಘಿಸಿದರು. ಯೋಗವು ನಿರಂತರವಾಗಿ ಎಲ್ಲರೂ ಮಡುವಂತಾಗಲಿ ಎಂದು ಹಾರೈಸಿದರು.
ಯೋಗ ಮಾರ್ಗದರ್ಶಕರಾಗಿ ಶೇಖರ ಕಡ್ತಲ ಯೋಗ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಯೋಗವೈಭವ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯದ ಮೂಲಕ ಯೋಗ ಪ್ರದರ್ಶನ ಗೈದು ಎಲ್ಲರ ಮೆಚ್ಚುಗೆಗೆ ಕಾರಣರಾದರು.











