ಮಜಿ ವೀರಕಂಭ ಜೂ. 5ರಂದು  ದ.ಕ.ಜಿ.ಪಂ.ಹಿ.ಪ್ರಾ.ಶಾಲೆ  ಇಲ್ಲಿ ಪರಿಸರ ದಿನಾಚರಣೆ ನಡೆಸಲಾಯಿತು. ಶಾಲಾ ಮುಖ್ಯಶಿಕ್ಷಕರಾದ  ನಾರಾಯಣ ಪೂಜಾರಿಯವರು ಜಾಗತಿಕ ತಾಪಮಾನದ ಏರಿಕೆಯಿಂದ ಭೂಮಿಗೆ ಆಗುತ್ತಿರುವ ಅನಾಹುತ ಹಾಗೂ ಅದರ ಬಗ್ಗೆ ನಾವು ವಹಿಸಬೇಕಾದ ಮುನ್ನೆಚರಿಕೆಯಲ್ಲಿ ಪರಿಸರ ಕಾಳಜಿಯು ಮುಖ್ಯವಾದುದು. ಇಂದು ಒಂದು ಮಗುವಿನ ಪುಟ್ಟ ಕೈಯು ನೆಡುವ ಪುಟ್ಟ ಗಿಡವು ಮುಂದೊಂದು ದಿನ ಹೆಮ್ಮರವಾಗಿ ಪರಿಸರದ ಉಳಿಯುವಿಕೆಗೆ ಕಾರಣವಾಗುವುದು. ಈ ನಿಟ್ಟಿನಲ್ಲಿ ನಾವೆಲ್ಲಾ ಪರಿಸರದ ಉಳಿವಿಗಾಗಿ ಇಂದೇ ಪಣ ತೊಡೋಣ ಎಂದರು. ಹಾಗೂ ಪ್ರತಿ ವಿದ್ಯಾರ್ಥಿಯು ಒಂದು ಗಿಡನೆಡುವ ಮೂಲಕ ಶಾಲಾ ಪರಿಸರವನ್ನು ಸುಂದರ ಗೊಳಿಸುವಲ್ಲಿ ಪ್ರೇರೇಪಿಸಿದರು.
IMG-20150606-WA0002
ಸಭಾ ಕಾರ್ಯಕ್ರಮದ ನಂತರ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟರು. ಶಿಕ್ಷಕಿಯರಾದ ಶಕುಂತಳಾ, ಸಿಸಿಲಿಯಾ ಸಂಗೀತ ಶರ್ಮರವರು ಭಾಗವಹಿಸಿದ್ದರು.  ಗೀತಾ ಹಾಗೂ ಕು.ಜ್ಯೋತಿ ಸಹಕರಿಸಿದರು.

By suddi9

Leave a Reply

Your email address will not be published. Required fields are marked *