ಸುದ್ದಿ9 ಕೈಕಂಬ: ಅಡ್ಡೂರು,ಪೊಳಲಿ, ಪುಂಚಮೆ,ಬಡಕಬೈಲ್, ಅಮ್ಮುಂಜೆ ಆಸುಪಾಸಿನ ಗ್ರಾಮೀಣ ಭಾಗದ ಜನರಿಗೆ ಸಂತಸದ ವಿಷಯ “ರಿಫಾ ಪಾಲಿ ಕ್ಲಿನಿಕ್ ಅಡ್ಡೂರು” ಇದರ ಸಹಯೋಗದೊಂದಿಗೆ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಮಂಗಳೂರು ಇವರು ಕಣಚೂರು ಆಸ್ಪತ್ರೆಯ ತಜ್ಙ ವೈದ್ಯರುಗಳಿಂದ ವಾರದ ಪ್ರತೀ ಬುಧವಾರ 9.30ರಿಂದ ಮಧ್ಯಹ್ನ 1 ಗಂಟೆಯವರೆಗೆ ಕೆಂದ್ರಕ್ಕೆ ಭೇಟಿ ನೀಡಿ ಉಚಿತ ತಪಾಸಣೆ ಹಾಗೂ ಉಚಿತ ವ್ಯದ್ಯಕೀಯ ಸಲಹೆಯನ್ನು ನೀಡುವರು.

ಈ ಭಾಗದ ಆಸುಪಾಸಿನ ಜನರು ಇದರ ಪ್ರಯೋಜನ ಪಡೆಯ ಬಹುದು. ಜೂ.10ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ರಿಫಾ ಪಾಲಿ ಕ್ಲಿನಿಕ್ ಅಡ್ಡೂರಿನಲ್ಲಿ ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ ಅವರು ಆರೋಗ್ಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
