ಮಂಗಳೂರು: ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ಹಲವು ಕಡೆಗಳಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ, ಡಿವೈಎಸ್ಪಿ ಆಗಿ ಸೇವೆ ಸಲ್ಲಿಸಿ ನಾಡಿನ ಜನತೆಗೆ ಅಪಾರ ಹೆಗ್ಗಳಿಕೆಗೆ ಪಾತ್ರರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಜೆ.ಭಂಡಾರಿ (ಬೆಳ್ತಂಗಡಿ ಜಯ ಭಂಡಾರಿ) (66.) ಜೂ.2ರಂದು ಸೋಮವಾರ ವಿಧಿವಶರಾದರು. ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯ ಹೊಟೇಲು ಆಶ್ರಯದ ಸಮೀಪ (ಮದರ್ ಪ್ಯಾಲೇಸ್ ಬಳಿ) ನಡೆದು ಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಾಗನರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಭಂಡಾರಿ ಅವರು ಚಿಕಿತ್ಸೆ ಫಲಕಾರಿ ಆಗದೇ ಮೃತ್ಯುವಶರಾದರು . ಮೇ.31 ರಂದು ಉಡುಪಿಯಲ್ಲಿ ಬಿ.ಜೆ.ಭಂಡಾರಿ ಅವರ ಸಂಬಂಧಿಕರ ಮದುವೆ ನಡೆದಿದ್ದು, ಮದುವೆಗೆ ಹಾಜರಾಗದ ಕಾರಣ ಸೋಮವಾರ ಬ್ರಹ್ಮಾವರದಲ್ಲಿ ಏರ್ಪಡಿಸಲಾಗಿದ್ದ ಆರತಕ್ಷತೆಯಲ್ಲಿ ಪಾಲ್ಗೊಂಡು ಬಳಿಕ ಮನೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಈ ಅಪಘಡ ಸಂಭವಿಸಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ.


ಬ್ರಹ್ಮಾವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕಾರು ಚಾಲಕ ಅಬ್ದುಲ್ ರಹೀಂನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ದ.ಕ.ಜಿಲ್ಲಾ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ದುಡಿಯುತ್ತಿದ್ದ ಭಂಡಾರಿ ಅವರ ಸಾವಿಗೆ ಉನ್ನತ ಪೊಲೀಸ್ ಅಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಿ.ಜೆ.ಭಂಡಾರಿ ಮೂಲತಃ ಬೆಳ್ತಂಗಡಿಯವರಾಗಿದ್ದು, ಮಂಗಳೂರು ಪಡೀಲ್ನಲ್ಲಿ ವಾಸವಾಗಿದ್ದರು. 1979 ರಲ್ಲಿಪೋಲಿಸ್ ಇಲಾಖೆಗೆ ಭರ್ತಿ ಗೊಂಡಿದ್ದ ಭಂಡಾರಿ ಅವರು ನಗರದಕ್ರೈಮ್ ಬ್ಯೂರೋ, ಸಿಬಿಐ, ರಾಜ್ಯ ಬೇಹುಗಾರಿಕಾ ಪಡೆ, ಲೋಕಾಯುಕ್ತ ಇಲಾಖೆಗಳಲ್ಲಿ ಹಾಗೂ ಎಸಿಪಿ ಆಗಿಯೂ ಶ್ರಮಿಸಿದ್ದರು. ರಾಷ್ಟ್ರಪತಿ ಪದಕ, ಎರಡು ಬಾರಿ ಮುಖ್ಯಮಂತ್ರಿ ಪದಕಗಳೊಂದಿಗೆ ಗೌರವಿಸಲ್ಪಟ್ಟಿದ್ದರು. ಭಂಡಾರಿ ಅವರ ಪಾಥರ್ಿವ ಶರೀರವನ್ನು ಇಂದಿಲ್ಲಿ ಪೂರ್ವಾಹ್ನ ತರಲಾಗಿ ರಿಸರ್ವ್ ಪೋಲಿಸ್ ಕಮೀಶನರ್ ಕಛೇರಿ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಯಿತು. ದ.ಕ ಜಿಲ್ಲಾ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಐಜಿಪಿ ಅಮೃತ್ ಪಾವ್ಲ್, ಪೋಲಿಸ್ ಆಯುಕ್ತ ಎಸ್.ಮುಗುಗನ್, ಎಸ್ಪಿ ಡಾ| ಶಂಕರಪ್ಪ, ಸಹಾಯಕ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಿವೃತ್ತ ಪೋಲಿಸ್ ಅಧಿಕಾರಿಗಳಾದ ಎಸ್.ಶರೀಫ್, ಕೆ.ಹರೀಶ್ಚಂದ್ರ, ಎಂ.ಅಬ್ಬಾಸ್, ಎಂ.ಎನ್ ಶೆಟ್ಟಿ, ಮಿತ್ರ ಹೆರಾಜೆ, ಎಸ್.ಪಿ ಪೂಂಜಾ ಸೇರಿದಂತೆಹಿರಿಯ ಪೋಲಿಸ್ ಅಧಿಕಾರಿಗಳು, ಮಾಜಿ ಶಾಸಕ ಗೋಪಾಲ್ ಭಂಡಾರಿ ಮತ್ತಿತರ ಗಣ್ಯರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಬಳಿಕ ಮಂಗಳೂರು ಪಡೀಲ್ನ ಸ್ವನಿವಾಸಕ್ಕೆ ರವಾನಿಸಿ ತದಾನಂತರ ಮಂಗಳೂರು ನಂದಿಗುಡ್ಡೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಬಿ.ಜೆ.ಭಂಡಾರಿ ನಿಧನಕ್ಕೆ ತೀವ್ರ ಸಂತಾಪ ಭಂಡಾರಿ ಸಮುದಾಯದ ಹಿರಿಮೆಯ ಸುಪುತ್ರರಾಗಿದ್ದು, ಹಿರಿಯ ನಿವೃತ್ತ ಪೋಲಿಸ್ ಅಧಿಕಾರಿಯಾಗಿ ವಿಧಿವಶರಾದಬಿ.ಜೆ.ಭಂಡಾರಿ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರೋರ್ವ ಶ್ರೀ ಕಚ್ಚೂರು ನಾಗೇಶ್ವರ ದೇವರ ಪರಮ ಭಕ್ತರಾಗಿ ಸಮಾಜದ ಮತ್ತು ಧಾರ್ಮಿಕ ಸೇವಾಳುವಾಗಿ ಕಾರ್ಯನಿರತರಾಗಿದ್ದಾರು. 2011ನೇ ಜನವರಿ.26ರಂದು ಕುರ್ಲ ಪೂರ್ವದಲ್ಲಿನ ಬಂಟರ ಸಂಘದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯ 57ನೇ ವಾರ್ಷಿಕ ಪರಿವಾರ ಸಹಮಿಲನದಲ್ಲಿ ಬಿ.ಜೆ ಭಂಡಾರಿ ಮತ್ತು ಶ್ರೀಮತಿ ಪ್ರಫುಲ್ಲಾ ಬಿ.ಭಂಡಾರಿ ಅವರನ್ನು ಗೌರವಿಸಿರುವುದನ್ನು ನೆನಪಿಸಿಕೊಂಡಭಂಡಾರಿ ಮಹಾ ಮಂಡಲದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆಸಮುದಾಯಕ್ಕೆ ತುಂಬಲಾಗದ ನಷ್ಟ ಎಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಸಂಸದ ನಳಿನ್ಕುಮಾರ್ ಕಟೀಲು, ಶ್ರೀ ಕಚ್ಚೂರು ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಿನೇಶ್ ಭಂಡಾರಿ ಮತ್ತು ಅಧ್ಯಕ್ಷ ಮಾಧವ ಕುಳೂರು ಜಯ ಸಿ.ಸುವರ್ಣ, ಡಾ| ಸುನೀತಾ ಎಂ. ಶೆಟ್ಟಿ, ಧರ್ಮಪಾಲ್ ಯು.ದೇವಾಡಿಗ, ಐಕಳ ಹರೀಶ್ ಶೆಟ್ಟಿ, ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಡಾ| ಶಿವರಾಮ್ ಕೆ.ಭಂಡಾರಿ, ಭಂಡಾರಿ ಸೇವಾ ಸಮಿತಿ (ರಿ.) ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ, ಉಪಾಧ್ಯಕ್ಷರುಗಳಾದ ನ್ಯಾ| ಆರ್.ಎಂ ಭಂಡಾರಿ ಮತ್ತು ಸದಾನಂದ ಕುಮಾರ್ ಭಂಡಾರಿ, ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ, ಗೌ| ಕೋಶಾಧಿಕಾರಿ ರಮೇಶ್ ವಿ.ಭಂಡಾರಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಭಂಡಾರಿ ಪುಣೆ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಭಂಡಾರಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾ| ಸುಂದರ್ ಜಿ.ಭಂಡಾರಿ, ಮಹಿಳಾ ವಿಭಾಗ ಕಾರ್ಯಧ್ಯಕ್ಷೆ ಲಲಿತಾ ವಿ.ಭಂಡಾರಿ ಮತ್ತಿತರ ಗಣ್ಯರು ಸಂತಾಪವ್ಯಕ್ತ ಪಡಿಸಿ ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ






