ಮೂಡುಬಿದಿರೆ: ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿದ ನೆರೆಮನೆಯ ತಂದೆ ಹಾಗೂ ಮೂವರು ಹೆಣ್ಣು ಮಕ್ಕಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೋಟೆಬಾಗಲಿನ ಸುಭಾಸ್‍ನಗರದ ಮನೆಯಲ್ಲಿ ಮಹಂತೇಶ ಮತ್ತು ಆತನ ತಾಯಿ ಮಧ್ಯೆ ಭಾನುವಾರ ಯಾವುದೊ ವಿಷಯದಲ್ಲಿ ಮಾತಿಗೆ ಮಾತು ಬೆಳೆದಿತ್ತು. ಇದನ್ನು ಕೇಳಿದ ಎದುರುಮನೆಯ ರವಿ ದೇವಾಡಿಗ ಎಂಬಾತ ಸದ್ರಿ ಮನೆಯವರು ತನ್ನನ್ನುದ್ದೇಶಿಸಿ ಬೈದಿರಬೇಕೆಂಬ ಗುಮಾನಿ ಮೇರೆಗೆ ಮಹಂತೇಶ ಅವರ ಮನೆ ಆವರಣಕ್ಕೆ ಬಂದು ಆತನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿದ್ದಾರೆನ್ನಲಾಗಿದೆ. ಇದೇ ವಿಷಯದಲ್ಲಿ ರವಿ ಮತ್ತು ಮಹಂತೇಶ್ ಮಧ್ಯೆ ಹೊಡೆದಾಟ ಕೂಡ ನಡೆದಿದೆಯೆನ್ನಲಾಗಿದೆ. ಪ್ರಕರಣದಲ್ಲಿ ರವಿಯ ಮೂವರು ಹೆಣ್ಣುಮಕ್ಕಳು ಕೂಡ ಭಾಗಿಯಾಗಿದ್ದಾರೆನ್ನಲಾಗಿದ್ದು ಮೂಡುಬಿದಿರೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *