ಮೂಡುಬಿದರೆ: ಬೆಳುವಾಯಿ ಗ್ರಾ.ಪಂ. ವ್ಯಾಪ್ತಿಯ ಕೆಸರ್ಗದ್ದೆಯಲ್ಲಿ ಶನಿವಾರ ತಡರಾತ್ರಿ ಲಾರಿಯೊಂದು ಮೋರಿಗೆ ಬಿದ್ದಿದೆ.
ಭದ್ರಾವತಿ ಮೂಲದ ಎನ್ನಲಾಗುತ್ತಿರುವ ಲಾರಿಯು ಮೂಡುಬಿದರೆಯಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದಾಗ ತಿರುವಿನಲ್ಲಿ ಚಾಲಕನಿಗೆ ಗೊಂದಲ ಉಂಟಾಗಿ ನಿಯಂತ್ರಣ ತಪ್ಪಿ, ಮೋರಿಗೆ ಬಿದ್ದಿದೆ. ಅಪಘಾತದಲ್ಲಿ ಲಾರಿ ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿವೆ.



