ಮೂಡುಬಿದರೆ: 2014-15ನೇ ಸಾಲಿನಲ್ಲಿ ನೂತನ ರೋಟರಿ ಕ್ಲಬ್ಗಳ ಮಾಡಿದ ಸೇವೆ, ಸಾಧನೆಗಳನ್ನು ಪರಿಗಣಿಸಿ ಕೊಡಮಾಡುವ `ಬೆಸ್ಟ್ ಔಟ್ಸ್ಟಾಡಿಂಗ್ ನ್ಯೂ ಕ್ಲಬ್’ ಪ್ರಶಸ್ತಿಯನ್ನು ರೋಟರಿ ಕ್ಲಬ್ ಮೂಡುಬಿದರೆ ಟೆಂಪಲ್ ಟೌನ್ ಪಡೆದಿದೆ.
ಪ್ರಶಸ್ತಿ ಪಡೆದ ರೋಟರಿ ಟೆಂಪಲ್ ಟೌನ್

ರೋಟರಿ ಜಿಲ್ಲೆ-3180 ಮೈಸೂರಿನಲ್ಲಿ ಏರ್ಪಡಿಸಿದ ಆವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೋಟರಿ ಜಿಲ್ಲೆ-3180ರ ಜಿಲ್ಲಾ ಗವರ್ನರ್ ಡಾ.ಬಾಸ್ಕರ್ ಎಸ್., ಪ್ರಶಸ್ತಿ ಸಮಿತಿಯ ಗುರುರಾಜ್.ಎಸ್ ಪ್ರಶಸ್ತಿ ನೀಡಿ ಗೌರವಿಸಿದರು.
ರೋಟರಿ ಟೆಂಪಲ್ ಟೌನ್ ಹಾಗೂ ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಪ್ರಶಸ್ತಿ ಸ್ವೀಕರಿಸಿದರು. ಕ್ಲಬ್ನ ನಿಯೋಜಿತ ಅಧ್ಯಕ್ಷ ಉಮೇಶ್ ರಾವ್, ಪದಾಧಿಕಾರಿಗಳಾದ ಅಬ್ದುಲ್ ರೆಹಮಾನ್, ಹರೀಶ್, ವಸಂತ್ ಮೊದಲಾದವರಿದ್ದರು.
