ಮಂಗಳೂರು: ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌ ಸ್ವರ್ಣಾಭರಣ ಸಂಸ್ಥೆಯ ಮಳಿಗೆ ಶಿವಮೊಗ್ಗ ಪಟ್ಟಣದ ಹೃದಯ ಭಾಗದ ಗೋಪಿ ವೃತ್ತದ ಮಲ್ಲಿಕಾರ್ಜುನ ಟಾಕೀಸ್‌ ಮುಂಭಾಗ ಮೇ 24 ಭಾನುವಾರ ಶುಭಾರಂಭಗೊಂಡಿತು.
2605mlr27-Sulthan(1)

ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ನೂತನ ಶೋರೂಂ ಉದ್ಘಾಟಿಸಿದರು. ಸುಲ್ತಾನ್‌ ಸಮೂಹದ ಅಧ್ಯಕ್ಷ ಡಾ| ಟಿ.ಎಂ. ಅಬ್ದುಲ್‌ ರವೂಫ್‌, ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ. ಅಬ್ದುಲ್‌ ರಹೀಮ್‌ ಉಪಸ್ಥಿತರಿದ್ದರು.

ಸಿಎಸ್‌ಆರ್‌ ಪ್ರೋಗ್ರಾಮ್‌ಗೆ ಶಾಸಕ ಕೆ.ಬಿ. ಪ್ರಸನ್ನ ಕುಮಾರ್‌, ಚಿನ್ನಾಭರಣ ವಿಭಾಗಕ್ಕೆ ಕಿದ್ವಾಯಿ ಶಾಲೆಯ ಅಧ್ಯಕ್ಷ ಹಾಗೂ ಖಾಝಿ ಮೌಲಾನ ಮೊಹಮ್ಮದ್‌ ಸಫೀವುಲ್ಲ, ವಜ್ರಾಭರಣ ಮಳಿಗೆಗೆ ಚಿಕ್ಕಮಗಳೂರು ಎಸ್‌ಎಸ್‌ಎಫ್‌ ಉಪಾಧ್ಯಕ್ಷ ತವಹ ಸಾದಿ ಅಲ್‌ ಅಪ್ಲಾಲಿ ಚಾಲನೆ ನೀಡಿದರು.

ವಾಚ್‌ಗಳ ವಿಭಾಗವನ್ನು ಸೆಕ್ರೇಡ್‌ ಹಾರ್ಟ್‌ ಕೆಥೆಡ್ರಲ್‌ನ ಧರ್ಮಗುರು ಗಿಲ್ಬರ್ಟ್‌ ಲೋಬೋ, ಬೆಳ್ಳಿ ಆಭರಣಗಳ ಮಳಿಗೆಯನ್ನು ಪಾಲಿಕೆ ಸದಸ್ಯ ಮರಿಯಪ್ಪ, ಅನ್‌ಕಟ್‌ ಡೈಮಂಡ್‌ ವಿಭಾಗವನ್ನು ಪಾಲಿಕೆ ಸದಸ್ಯ ಗೋಪಾಲಕೃಷ್ಣ ಜಿ. ಹಾಗೂ ಸ್ಕೀಂ ಉದ್ಘಾಟನೆಯನ್ನು ಸಹ್ಯಾದ್ರಿ ಮಹಿಳಾ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷೆ ವೀರಮ್ಮ ಪಿ. ಉದ್ಘಾಟಿಸಿದರು.

ಚಿನ್ನ ಮತ್ತು ವಜ್ರಾಭರಣಗಳ ವ್ಯವಹಾರದಲ್ಲಿ 45 ವರ್ಷಗಳ ಪರಂಪರೆ ಇರುವ ಸುಲ್ತಾನ್‌ ಮಳಿಗೆ ಇಂಟರ್‌ನ್ಯಾಷನಲ್‌ ಜೆಮಾಲಾಜಿಕಲ್‌ ಇನ್‌ಸ್ಟಿಟ್ಯೂಟ್‌(ಐಜಿಐ) ದೃಢೀಕೃತ ಡೈಮಂಡ್‌ ಆಭರಣಗಳನ್ನು, ವಿ.ವಿ.ಎಸ್‌. ಕ್ವಾಲಿಟಿ, ಇ.ಎಫ್‌. ವಜ್ರದ ಆಭರಣಗಳನ್ನು ಹಾಗೂ ಪ್ಲಾಟಿನಂ ಗಿಲ್ಡ್‌ ಇಂಟರ್‌ನ್ಯಾಷನಲ್‌ (ಪಿಜಿಐ) ದೃಢೀಕೃತ ಪ್ಲಾಟಿನಂ ಆಭರಣಗಳನ್ನು, ಶೇ. 100 ಬಿ.ಐ.ಎಸ್‌. ಹಾಲ್‌ಮಾರ್ಕ್‌, 916 ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ಪ್ಯೂರ್‌ವೆರ್‌, ಡೈಮಂಡ್‌ ಕಲೆಕ್ಷನ್ಸ್‌, ಚಾಕೊಲೇಟ್‌, ಫ್ಯಾಶನ್ಸ್‌, ಎಕ್ಸ್‌ಕ್ಲೂಸಿವ್‌ ಲೈಟ್‌ವೇಟ್‌ ಜ್ಯುವೆಲ್ಲರಿ, ಯುವ ಭಾರತಿಯರಿಗೆ ಆಮೋಖ, ಪ್ಲಾಟಿನಂ ಕಲೆಕ್ಷನ್ಸ್‌, ಅನ್‌ಕಟ್‌ ಡೈಮಂಡ್ಸ್‌, ಅಮೂಲ್ಯ ಅತ್ಯಮೂಲ್ಯ ಆಭರಣಗಳು, ಪವಿತ್ರ ಬಂಧನ್‌, ಮದುವೆ ಆಭರಣಗಳು, ಸನಕ, ಆ್ಯಂಟಿಕ್‌ ಕಲೆಕ್ಷನ್ಸ್‌, ಮೋತಿ ಪಾರ್ಟಿವೇರ್‌ ಕಲೆಕ್ಷನ್ಸ್‌, ತಾರಕ, ಮಕ್ಕಳ ಕಲೆಕ್ಷನ್ಸ್‌, ಶ್ರೇಷ್ಠ, ಸಾಂಪ್ರದಾಯಿಕ ಕಲೆಕ್ಷನ್ಸ್‌ ಹಾಗೂ ದಿ ಮ್ಯಾನ್‌, ಪುರುಷರ ಕಲೆಕ್ಷನ್ಸ್‌ ಇದು ಸುಲ್ತಾನ್‌ ಡೈಮಂಡ್‌ ಗೋಲ್ಡ್‌ನ ವಿಶೇಷ ಶ್ರೇಣಿ ಆಭರಣಗಳಾಗಿವೆ.

ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌ ಸ್ವರ್ಣಾಭರಣ ಸಂಸ್ಥೆಯ ದಾವಣಗೆರೆ ಹಾಗೂ ಹುಬ್ಬಳ್ಳಿ ಮಳಿಗೆ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ. ಅಬ್ದುಲ್‌ ರಹೀಮ್‌ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *