bande

 

 

ಗುಲ್ಬರ್ಗ(ಜ.15): ಮುನ್ನಾ ಮಟಾಷ್ ಆಗಿ ಒಂದು ವಾರ ಕಳೆದ ನಂತರ ಆತನನ್ನು ಸೆರೆ ಹಿಡಿಯಲು ಹೋಗಿ ಮುನ್ನಾನಿಂದ ಗುಂಡೇಟು ತಗಲಿದ್ದ ಪಿಎಸ್ಐ ಮಲ್ಲಿಕಾಜರ್ುನ ಬಂಡೆ ವಿಧಿವಷರಾಗಿದ್ದು ಕನರ್ಾಟಕ ಶೋಕಸಾಗರದಲ್ಲಿ ಮುಳುಗಿದೆ. ಇವರು ಹಲವಾರು ದಿನಗಳಿಂದ ಹೈದರಾಬಾದ್ನ ಯಶೋದಾ ಆಸ್ಪತ್ರೆಯಲ್ಲಿ ತುತರ್ು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಬದುಕುಳಿಯಲೆಂದೇ ಗುಲ್ಬರ್ಗದಾದ್ಯಂತ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಜನರ ಪ್ರಾರ್ಥನೆ ಫಲಿಸಲಿಲ್ಲ. ಬಂಡೆ ವಿಧಿವಶರಾಗುತ್ತಿದ್ದಂತೆ ಗುಲ್ಬರ್ಗದಾದ್ಯಂತ ಅಘೋಷಿತ ಬಂದ್ ವಾತಾವರಣ ಉಂಟಾಗಿದ್ದು ಸರಕಾರ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದೆ. 

ಜ.8ರಂದು ಮುನ್ನಾ ಎಂಬ ಪಾತಕಿಯನ್ನು ಬಂಡೆ ಸೆರೆ ಹಿಡಿಯಲು ಹೋಗಿದ್ದರು. ಈ ಸಂದರ್ಭದಲ್ಲಿ ಉಂಟಾದ ಗುಂಡಿನ ಚಕಮಕಿಯಲ್ಲಿ ಮುನ್ನಾ ಹಾರಿಸಿದ ಗುಂಡು ಬಂಡೆಯವರ ತಲೆಗೆ ಹೊಕ್ಕು ತಲೆಗೆ ತೀವ್ರ ಗಾಯವಾಗಿತ್ತು. ಬಂಡೆಯವರ ಪರಿಸ್ಥಿತಿ ನಿನ್ನೆ ಮತ್ತಷ್ಟು ಬಿಗಡಾಯಿಸಿತ್ತು. ಇವರಿಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಿದ್ದರೆ ಬದುಕುಳಿದಿರುತ್ತಿದ್ದರು ಎನ್ನಲಾಗುತ್ತಿದ್ದು ಸರಕಾರ ವಿದೇಶದಲ್ಲಿ ಚಿಕಿತ್ಸೆ ಕೊಡಿಸದೇ ಇರುವುದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿದೆ

By suddi9

Leave a Reply

Your email address will not be published. Required fields are marked *