ಮಂಗಳೂರು: ಜಯಕಿರಣ ಫಿಲ್ಮ್ ಬ್ಯಾನರ್‍ನಡಿ ನಿರ್ಮಿಸಿದ ತುಳು ಹಾಸ್ಯಚಿತ್ರ ಚಾಲಿಪೋಲಿಲು ಯಶಸ್ವಿಯಾಗಿ 200 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳೂರಿನ 92.2ಬಿಗ್ ಎಫ್‍ಎಂ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು.
chalipoliliu (1)

chalipoliliu (2)

chalipoliliu (3)

chalipoliliu (4)

chalipoliliu
ಕೇಕ್ ಕತ್ತರಿಸುವ ಮೂಲಕ ಸಮಾರಂಭದಲ್ಲಿ ಮಾತನಾಡಿದ ಕುಟುಂಬ ಮತ್ತು ಆರೋಗ್ಯ ಇಲಾಖೆ ಸಚಿವ ಯು.ಟಿ.ಖಾದರ್, ತುಳು ಬರಹಗಾರರು, ನಾಟಕಕಾರರ ಸತತ ಶ್ರಮದಿಂದ ತುಳು ಭಾಷೆಯ ಜೀವಂತಿಕೆ ಹೆಚ್ಚಿದೆ. ತುಳು ಸಿನಿಮಾರಂಗದಲ್ಲಿ ಚಾಲಿಪೋಲಿಲು ಸಿನಿಮಾ 200 ದಿನಗಳನ್ನು ಪೂರೈಸಿ ದಾಖಲೆ ನಿರ್ಮಿಸಿದೆ. ಭಾಷೆ ತಿಳಿದಿಲ್ಲದವರೂ ಚಿತ್ರನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ತುಳು ಭಾಷೆ ಹೆಗ್ಗಳಿಕೆ ಪಡೆದುಕೊಂಡಿರುವುದರ ಸಂಕೇತ. ಕರಾವಳಿಗೆ ಸೀಮಿತವಾಗದೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಸಿನಿಮಾದ ಜನಪ್ರಿಯತೆ ಪಸರಿಸುತ್ತಿರುವ ಮೂಲಕ ತುಳುವಿಗೆ ಉತ್ತಮ ವೇದಿಕೆ ಸಜ್ಜಾಗುತ್ತಿದೆ ಎನ್ನುವ ಸಂದೇಶ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಮಾತನಾಡಿ, ಚಿತ್ರ ಎಲ್ಲಾ ಭಾಷೆಯ ಜನರಿಗೂ ಮೆಚ್ಚುಗೆಯಾಗಿದ್ದು ಬಹುದೊಡ್ಡ ಸಂಗತಿ. ನಿರೀಕ್ಷೆಗೂ ಮೀರಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿರುವುದು ತುಳು ಕಲಾಭಿಮಾನಿಗಳಿಂದ ಸಾಧ್ಯವಾಗಿದೆ ಎಂದರು.
ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, ಮೇ22ರಿಂದ ಪ್ರಭಾತ್ ಚಿತ್ರಮಂದಿರ ಹಾಗೂ ಮೇ27ರಂದು ಬಹರೈನ್‍ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು. ಬಿಗ್‍ಎಫ್‍ಎಂನ ಸಿಬ್ಬಂದಿಗಳಾದ ಶಿಲ್ಪ, ಜೋಯೆಲ್, ರಾಕೇಶ್, ಕಿರಣ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *