ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ದುರ್ವರ್ತನೆ ಮತ್ತು ಲೆಡರ್ಹೆಡ್ ದುರುಪಯೋಗ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ವಕ್ಫ್ ಬೋಡರ್್ ಅಧ್ಯಕ್ಷರಿಗೆ ಮಸೀದಿ ಸದಸ್ಯರೇ ಸ್ವತಃ ದೂರು ಸಲ್ಲಿಸಿದ ಘಟನೆ ನಡೆದಿದೆ.
ಮಸೀದಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಮತ್ತು ಸದಸ್ಯ ಮುಹಮ್ಮದ್ ಶಫೀಕ್ ಎಂಬವರು ವಕ್ಫ್ ಸಮಿತಿಗೆ ಈ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದು, ಈಗಾಗಲೇ ನಮ್ಮ ವಿರುದ್ಧ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿರುವ ಮಸೀದಿ ಕಾರ್ಯದಶರ್ಿ ಅಬ್ದುಲ್ ಮಜೀದ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *