ಬಂಟ್ವಾಳ: ನೇತ್ರಾವತಿ ನದಿ ತುಂಬೆಯಲ್ಲಿ ನೀರು ಉಕ್ಕೇರಿ ಹರಿದು ನೂತನ ಡ್ಯಾಂ ಸಾಮಾಗ್ರಿ ಸಲಕರಣೇ ಸಂಪೂರ್ಣ ಕೊಚ್ಚಿ ಹೋಗಿದ್ದು ಸುಮಾರು 1 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.
DSC_6144

DSC_6156

DSC_6159

DSC_6178

DSC_6180

DSC_6184

DSC_6192

DSC_6193

DSC_6201
ರಾತ್ರಿ 8.30ರ ಸುಮಾರಿಗೆ ಘಟನೆ ನಡೆದಿದೆ. ನದಿಯ ನಡುವೆ ಸುಮಾರು 200 ಗುತ್ತಿಗೆ ಕಾರ್ಮಿಕರು ಊಟ ಮುಗಿಸಿ ಮಲಗುವಷ್ಟರಲ್ಲಿ ನೀರು ಬರುತ್ತಿರುವುದನ್ನು ಗಮನಿಸಿ ಎದ್ದುಬಿದ್ದು ಮೇಲಕ್ಕೆ ಓಡಿ ಬಂದಿದ್ದಾರೆ.
ಇದೇ ಘಟನೆ ತಡರಾತ್ರಿ ಆಗುತ್ತಿದ್ದಲ್ಲಿ ಯಾರೊಬ್ಬರೂ ಉಳಿಯುವ ಸಾಧ್ಯತೆ ಇರಲಿಲ್ಲ ಎನ್ನುವುದನ್ನು ಸೈಟ್ ಇನ್‍ಚಾರ್ಜ್ ಶೇಸು ಹೇಳಿದ್ದಾರೆ.
ನೀರು ಎಷ್ಟೊಂದು ರಭಸವಾಗಿ ಉಕ್ಕಿ ಹರಿದಿತ್ತು ಎಂದರೆ ಕೇವಲ ಐದು ನಿಮಿಷಗಳ ಅವ„ಯಲ್ಲಿ ಕಾರ್ಮಿಕರ ಶೆಡ್‍ಗಳು, ಸ್ಟೀಲ್ ರಾಡ್‍ಗಳು ,ಹಲವು ಪಂಪ್‍ಗಳು, ಡೀಸೆಲ್ ಜನರೇಟರ್‍ಗಳು, ಹೇಳಹೆಸರಿಲ್ಲದಂತೆ ಮಣ್ಣಿನ ಅಡಿಗೆ ಬಿದ್ದು ಕಣ್ಮರೆಯಾಗಿದೆ.
ಇಂತಹ ಒಂದು ಘಟನೆ ಆಗಬಹುದು ಎಂಬ ಯಾವುದೇ ನಿರೀಕ್ಷೆ ಇಲ್ಲದ ಕಾರಣ ಕಾರ್ಮಿಕರು, ಸಂಬಂಧಪಟಟ್ಟ ಮೇಲ್ವಿಚಾರಕರು, ಮುಖ್ಯಸ್ಥರು ರಾತ್ರಿಯ ಕೆಲಸಕ್ಕೆ ಸಜ್ಜಾಗುತ್ತಿದ್ದರೆ ಕೆಲವರು ನಿದ್ದೆಯ ವಿಶ್ರಾಂತಿಯಲ್ಲಿದ್ದರು.

ಘಟನೆಯ ನಡುವೆ 5 ಕೋಟಿ ರೂ. ಮೌಲ್ಯದ ಟೆಲಿಬೆಲ್ಟ್ ರೊಟೆಕ್ಟ್ ಕಾಂಕ್ರಿಟ್ ಪೆÇೀರಿಂಗ್ ಮೆಷಿನ್ ಒಂದನ್ನು ರಕ್ಷಿಸಲು ಸಾಧ್ಯವಾಗಿತ್ತು. (ಸಿಮೆಂಟ್, ಜಲ್ಲಿ ಮರಳು ಮಿಶ್ರಣ ಮಾಡುವ ಈ ಯಂತ್ರ ತಾನು ಇದ್ದಲಿಂದಲೇ ತನ್ನ ಸುತ್ತ ಎಲ್ಲಿಗೆ ಬೇಕಾದರೂ ಮಿಶ್ರಣವನ್ನು ಮಣ್ಣಿನ ಒಳಗೆ, ಎತ್ತರದ ಪಿಲ್ಲರ್‍ಗಳಿಗೆ ಸ್ವತ: ತುಂಬಿಸುವ ಸಾಮಥ್ರ್ಯ ಇರುವ ಯಂತ್ರ).
ಅದು ಕೂಡಾ ಕೇವಲ ಮೂರು ನಿಮಿಷದ ಅವ„ಯಲ್ಲಿ ಸ್ಥಳಾಂತರಿಸುವ ಮೂಲಕ ರಕ್ಷಣೆ ಮಾಡಿದ್ದು ಅದು ಹೊರತು ಎಲ್ಲಾ ಮೆಷಿನರಿಗಳು ಕೊಚ್ಚಿ ಹೋಗಿದೆ.
ಫಿಲ್ಲರ್ ನಿರ್ಮಾಣಕ್ಕೆ ತಂದು ಹಾಕಿದ್ದ ಸುಮಾರು 50 ಲಕ್ಷ ರೂ. ಮೌಲ್ಯದ ಸ್ಟೀಲ್ ರಾಡ್‍ಗಳು ಕೊಚ್ಚಿ ಹೋಗಿದ್ದಲ್ಲದೆ ಮಣ್ಣಿನಲ್ಲಿಯೂ ಹುಗಿದು ಹೋಗಿದೆ.
ನೂರು ಅಶ್ವ ಶಕ್ತಿಯ ಸುಮಾರು 10 ಲಕ್ಷ ರೂ. ಮೌಲ್ಯದ ಪಂಪ್‍ಗಳು ನೀರಲ್ಲಿ ಮುಳುಗಿ ಕಾಣೆಯಾಗಿದೆ. 30 ಎಚ್.ಪಿಯ ಮೂರು ಪಂಪ್‍ಗಳು ನೀರಲ್ಲಿ ಮುಳುಗಿದೆ.
12 ಲಕ್ಷ ರೂ. ಮೌಲ್ಯದ ಒಂದು ಜನರೇಟರ್ ಮಣ್ಣಿನ ಅಡಿಯಲ್ಲಿ ಹೂತು ಹೋಗಿದೆ.

ಮಾಹಿತಿ ನೀಡದಿರುವುದು ಕಾರಣ
ಶಂಭೂರು ಎಎಂಆರ್ ಡ್ಯಾಂನಲ್ಲಿ ಹೆಚ್ಚುವರಿ ನೀರನ್ನು ಯಾವುದೇ ಮಾಹಿತಿ ನೀಡದೆ ಕೆಳಗೆ ಹರಿಯಬಿಟ್ಟದ್ದು ದುರ್ಘಟನೆಗೆ ಕಾರಣ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಶಂಭೂರು ಡ್ಯಾಂನಲ್ಲಿ 18.9 ಅಡಿಗಳಷ್ಟು ನೀರನ್ನು ಉಳಿಸಿಕೊಳ್ಳಬಹುದು. ಹೆಚ್ಚುವರಿ 19. 4 ಮೀಟರ್ ಮೀರಿ ನೀರು ಮಳೆಯ ಕಾರಣ ಅಲ್ಲಿಗೆ ಹರಿದು ಬಂದಿರುವುದು ಅನಾಹುತಕ್ಕೆ ಕಾರಣವಾಗಿದೆ.
ಡ್ಯಾಂನಲ್ಲಿ ಹೆಚ್ಚುವರಿ ನೀರು ಹರಿದು ಬಂದಿದ್ದರೂ ಅದನ್ನು ಬೇಸಿಗೆಯ ಸಂದರ್ಭದಲ್ಲಿ ಹೊರಗೆ ಬಿಡುವಾಗ ಸಂಬಂಧಪಟ್ಟ ಇಲಾಖೆಗೆ, ತುಂಬೆ ಡ್ಯಾಂ ಸೈಟ್‍ಗೆ, ಬಂಟ್ವಾಳ ತಹಶೀಲ್ದಾರ್‍ಗೆ ತುರ್ತು ಸಂದರ್ಭದ ಮಾಹಿತಿ ನೀಡಬೇಕಾಗಿತ್ತು.
ಇದಾವುದನ್ನು ಮಾಡದೆ ಶಂಭೂರು ಎಎಂಆರ್ ಡ್ಯಾಂನಿಂದ ನೀರನ್ನು ಹೊರಗೆ ಹರಿಯಬಿಟ್ಟಿತ್ತು. ನೀರು ಕೇವಲ ಎರಡು ಗಂಟೆಯಲ್ಲಿ ಹರಿದು ಬಂದು ತುಂಬೆ ಡ್ಯಾಂನಲ್ಲಿ ತುಂಬಿ ಉಕ್ಕಿ ಹರಿದು ಕೆಳಗೆ ನೂತನ ಡ್ಯಾಂ ಕಾಮಗಾರಿ ನಿರ್ವಹಣಾ ಸಾಮಾಗ್ರಿಗಳನ್ನು ಕೊಚ್ಚಿ ಹೋಗಲು ಕಾರಣವಾಗಿತ್ತು.
ಕೊಚ್ಚಿ ಹೋಗಿರುವ ಕಬ್ಬಿಣದ ಸಾಮಾಗ್ರಿಗಳು, ಸ್ಟೀಲ್ ರಾಡ್‍ಗಳು, ಕಾರ್ಮಿಕರ ಶೆಡ್, ಕಬ್ಬಿಣದ ತೊಲೆಗಳು, ಪಂಪ್, ಪ್ಲಾಸ್ಟಿಕ್ ಪೈಪ್‍ಗಳು, ಡಿಸೇಲ್ ಪಂಪ್‍ಗಳು ನದಿಯ ಉದ್ದಕ್ಕೆ ಅಲ್ಲಲ್ಲಿ ಮಣ್ಣಿನ ಅಡಿ, ನೀರಲ್ಲಿ ಚೆಲ್ಲಾಪಿಲ್ಲಿಯಾಗಿ ಕೆಲವು ಕಾಣುತ್ತಿದ್ದವು.
ಡ್ಯಾಂ ನಿರ್ಮಾಣಕ್ಕಾಗಿ ಮಾಡಿದ ಮಣ್ಣಿನ ರಸ್ತೆಯ ಎರಡು ಕಡೆಯಲ್ಲಿ ಸಂಪೂರ್ಣ ಕೊಚ್ಚಿ ಹೋಗಿದ್ದು ನದಿಯ ಇನ್ನೊಂದು ಬದಿಗೆ ಸಂಪರ್ಕ ಕಡಿದು ಹೋಗಿದೆ.
ರಸ್ತೆಯ ಪುನರ್ ನಿರ್ಮಾಣಕ್ಕೆ ಇನ್ನು ಕನಿಷ್ಟ ಎಂದರೆ ಒಂದು ವಾರದ ಸಮಯ ಬೇಕಾಗಿದ್ದು, ಪಂಪ್ ಮತ್ತು ಇತರ ಸಾಮಾಗ್ರಿಗಳನ್ನು ಒಟ್ಟು ಸೇರಿಸಲು ಹದಿನೈದು ದಿನಗಳ ಕಾಲ ಬೇಕಾಗಬಹುದು ಎಂದು ಸೆಕ್ಷನ್ ಅಫೀಸರ್ ಶೇಖರ್ ಹೇಳಿದ್ದಾರೆ.
ಲೆಕ್ಕಾ„ಕಾರಿ ರವಿಚಂದ್ರ ಸ್ಥಳದಲ್ಲಿದ್ದು ಅವರ ಮಾಹಿತಿಯಂತೆ ತುಂಬೆ ನೂತನ ಡ್ಯಾಂ ಸಿವಿಲ್ ಕೆಲಸಗಳು ಶೇ. 90ರಷ್ಟು ಮುಗಿದಿತ್ತು. ತಾಂತ್ರಿಕ ಕೆಲಸಗಳು ಶೇ. 50ರಷ್ಟು ಬಾಕಿ ಇದ್ದು ಮುಂದಿನ ಹದಿನೈದು ದಿನಗಳಲ್ಲಿ ಅದನ್ನು ಪೂರೈಸಲು ಹೆಚ್ಚುವರಿ ಕಾರ್ಮಿಕರನ್ನು, ಯಂತ್ರೋಪಕರಣಗಳನ್ನು ಸ್ಥಳಕ್ಕೆ ತಂದಿಡಲಾಗಿತ್ತು.ಅವುಗಳಲ್ಲಿ ಬಹುತೇಕ ನೀರಲ್ಲಿ ಕೊಚ್ಚಿ ಹೋಗಿದೆ. ಮುಂದಿನ ವರ್ಷಕ್ಕಷ್ಟೆ ಅದನ್ನು ಪೂರ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಾದೀತು ಎಂದಿದ್ದಾರೆ.

ಒಮ್ಮಿಂದೊಮ್ಮೆಲೆ ಹರಿದು ಬಂದಿರುವ ನೀರಿನ ಮಟ್ಟ ಸರಿಸುಮಾರು 2ಮೀಟರ್ ಎತ್ತರ, ಇ50 ಮೀಟರ್ ಕ್ಯೂಮೆಕ್ಸ್ ಅಗಲದ ವ್ಯಾಪ್ತಿಯ ಒತ್ತಡವನ್ನು ಹೊಂದಿತ್ತು ಎಂದು ಸೈಟ್ ಇಂಜಿನಿಯರ್ ಹೇಳಿದ್ದಾರೆ. ಇಷ್ಟು ಒತ್ತಡದ ನೀರಿನ ಹರಿವನ್ನು ಏಕಕಾಲದಲ್ಲಿ ಯಾವುದೇ ಡ್ಯಾಂ ತಡೆಯುವುದು ಸಾಧ್ಯವಿಲ್ಲ. ಆದರೆ ಹೊರಗೆ ಹರಿಯ ಬಿಡುವ ಸಂದರ್ಭದಲ್ಲಿ ಸೂಕ್ತ ಮಾಹಿತಿ ನೀಡಿದರೆ ಸೊತ್ತು ರಕ್ಷಣೆಗೆ ಸಾಧ್ಯವಿತ್ತು ಎಂದಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಮೇ 16ರಂದು ಸ್ಥಳಕ್ಕೆ ಪತ್ರಕರ್ತರನ್ನು ಬಿಡಲಾಗಿದ್ದು ಸಾರ್ವಜನಿಕರಿಗೆ ಸಂಚಾರಕ್ಕೆ ನಿರ್ಬಂದಿಸಲಾಗಿದೆ. ಡ್ಯಾಂ ಮೇಲ್ಗಡೆಯಿಂದ ಹೆಚ್ಚುವರಿ ನೀರು ಹರಿಯುತ್ತಿದೆ. ಡ್ಯಾಂ ಸೈಟ್ ರಸ್ತೆ ಕೊಚ್ಚಿ ಹೋಗಿದ್ದು ಸಂಪರ್ಕ ನಿಲುಗಡೆಗೆ ಕಾರಣವಾಗಿದೆ ಎಂದು ಮೇಲ್ವಿಚಾರಕ ವಿಷ್ಣುಮೂರ್ತಿ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಇಂತಹ ರೀತಿಯಲ್ಲಿ ನೀರಿನ ಹರಿವು ಇದ್ದಿರಲಿಲ್ಲ. ಪ್ರಸ್ತುತ ವರ್ಷ ಮಳೆಯಿಂದಾಗಿ ಕೆಲಸ ಕೊನೆಯ ಹಂತದಲ್ಲಿ ಕೆಲಸ ಕೆಡುತ್ತಿದೆ. ಪ್ರಸ್ತುತ ಉಂಟಾಗಿರುವ ಹಾನಿಯಿಂದ ಇನ್ನು ಮೊದಲಿನಂತೆ ವೇಗವಾಗಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದು ವಿವರಿಸಿದ್ದಾರೆ.
ಶಬ್ದ ಮಾಡದ ಸೈರನ್
ಬೇಸಿಗೆ ಸಂದರ್ಭ ಶಂಭೂರು ಎಎಂಆರ್ ಡ್ಯಾಂನಿಂದ ನೀರನ್ನು ಹರಿಯ ಬಿಡುವುದಿದ್ದರೆ ಶಂಭೂರು ಸೈಟ್‍ನಲ್ಲಿ, ಬಂಟ್ವಾಳದ ಬಡ್ಡಕಟ್ಟೆ ಮತ್ತು ನಂದಾವರದಲ್ಲಿ ಇರುವಂತೆ ಸೈರನ್ ಮೊಳಗಿಸಿ ಮೂರು ಗಂಟೆಗಳ ನಂತರ ನೀರು ಹರಿಯ ಬಿಡಬೇಕು.
ಶುಕ್ರವಾರ ದಿನ ಯಾವುದೇ ಸೈರನ್ ಮೊಳಗಿಸದೆ ನೀರನ್ನು ಬಿಡಲಾಗಿದೆ. ಜನ ಸಾಮಾನ್ಯರಿಗೆ ಕೂಡಾ ಯಾವುದೇ ಮಾಹಿತಿ ಇಲ್ಲ, ಇಲಾಖೆಗೂ ವಿಚಾರ ತಿಳಿದಿಲ್ಲ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೂ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *