ಬಂಟ್ವಾಳ :: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಮತ್ತು ಶ್ರೀ ಕ್ಷೇ.ಧ.ಗ್ರಾ.ಯೋ. ಇವರ ಸಹಯೋಗದೊಂದಿಗೆ, ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾ.ಪಂ., ಕಾವಳಪಡೂರು ಮಧ್ವ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಇವರ ಸಹಕಾರದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಚಾರಿ ಆಸ್ಪತ್ರೆಯ ಉಚಿತ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಗುರುವಾರ ಸ.ಹಿ.ಪ್ರಾ.ಶಾಲಾ ಬಳಿ ಜರಗಿತು.
pkt4
ಶ್ರೀ ಕ್ಷೇತ್ರ ಕಾರಿಂಜದ ಮಾಜಿ ಆಡಳಿತ ಮೊಕ್ತೇಸರ ಪಿ.ಜಿನರಾಜ ಆರಿಗ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ದೂರದರ್ಶಿತ್ವದಿಂದ ಸಂಚಾರಿ ಆಸ್ಪತ್ರೆ ಕಾರ್ಯಗತಗೊಂಡಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡಕೊಳ್ಳಬೇಕು. ಶಿಬಿರಕ್ಕೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು. ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಸರಕಾರಗಳು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರೂ ಸಂಚಾರಿ ಆಸ್ಪತ್ರೆಯಿಂದ ಜನತೆಗೆ ಉತ್ತಮ ಚಿಕಿತ್ಸೆ ಲಭ್ಯವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಈ ಯೋಜನೆಯಿಂದ ಲಕ್ಷಾಂತರ ಬಡ ಜನತೆಗೆ ಸಹಕಾರವಾಗಿದೆ. ಶಿಬಿರ ನಡೆಸಲು ಸಹಕರಿಸಿದ ಮಧ್ವದ ಯುವಜನತೆ ಮತ್ತು ಇತರ ಸಂಘ ಸಂಸ್ಥೆಗಳು ಅಭಿನಂದನೀಯರು ಎಂದು ಹೇಳಿದರು.
ಶ್ರೀ ಕ್ಷೇ.ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ, ಮೆಡಿಕಲ್ ಟ್ರಸ್ಟ್‍ನ ವೈದ್ಯಾ„ಕಾರಿ ಡಾ| ನಾರಾಯಣ ಪ್ರಭು, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಕಾವಳಪಡೂರು ಮಧ್ವ ಮಹಿಳಾ ವಿ.ಸ.ಸಂಘ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ, ತಾ.ಪಂ.ಸದಸ್ಯ ವಿನಯ ನಾಯಕ್, ರವಿಚಂದ್ರ ಜೈನ್ ಮಧ್ವ , ಮಧ್ವ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮದ್ ಶರೀಫ್, ಸತೀಶ್ ಆರ್.ಶೆಟ್ಟಿ ಮಧ್ವ , ಚಂದ್ರಹಾಸ ಶೆಟ್ಟಿ ಮಧ್ವ , ಕೊರಗಪ್ಪ ಗೌಡ ಮಾನಿಬೆಟ್ಟುಗುತ್ತು , ಮಧ್ವ ಒಕ್ಕೂಟ ಅಧ್ಯಕ್ಷ ಆನಂದ ಪೂಜಾರಿ, ಸೇವಾ ಪ್ರತಿನಿಧಿ ದಯಾವತಿ ಉಪಸ್ಥಿತರಿದ್ದರು.
ಶಿಬಿರದ ಸಂಯೋಜಕ, ಗ್ರಾ.ಪಂ.ಸದಸ್ಯ ಚಂದ್ರಶೇಖರ ಕರ್ಣ ಅವರು ಸ್ವಾಗತಿಸಿದರು. ಐ.ಎಂ.ಶರೀಫ್ ವಂದಿಸಿದರು. ಶ್ರೀ ಕ್ಷೇ.ಧ.ಗ್ರಾ.ಯೋ. ವಗ್ಗ ವಲಯ ಮೇಲ್ಚಿಚಾರಕ ವಸಂತ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.
ಶಿಬಿರವು ಮೇ 7ರಿಂದ ಜೂ. 29ರ ವರೆಗೆ ಪ್ರತೀ ಮೂರು ದಿನಗಳಿಗೊಮ್ಮೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *