ಮಂಗಳೂರು: ಭಾರತ ಸೇನಾ ತಂಡದವರು ಸೋಮವಾರ ಮುಕ್ತಾಯಗೊಂಡ ಹತ್ತೊಂಬತ್ತನೇ ರಾಷ್ಟ್ರೀಯ ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು. ತಮಿಳುನಾಡು ತಂಡ ರನ್ನರ್‌ ಅಪ್‌ ಸ್ಥಾನ ಪಡೆಯಿತು.
sports2
ಮಂಗಳಾ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ದಿನಗಳ ಕಾಲ ನಡೆದ ಈ ಕೂಟದಲ್ಲಿ ಸೇನಾ ತಂಡ ಒಟ್ಟು 123.5 ಅಂಕ ಪಡೆದರೆ, ಕಳೆದ ವರ್ಷ 125 ಅಂಕ ಪಡೆದು ಸಮಗ್ರ ಪ್ರಶಸ್ತಿ ಗೆದ್ದಿದ್ದ ತಮಿಳುನಾಡು ತಂಡ ಈ ಬಾರಿ 114 ಅಂಕ ಗಳಿಸಿ ರನ್ನರ್ಅಪ್‌ಗೆ ತೃಪ್ತಿಪಟ್ಟುಕೊಂಡಿತು.
ಸೇನಾ ತಂಡವು ಅದೇ 123.5 ಅಂಕಗಳೊಂದಿಗೆ ಪುರುಷರ ವಿಭಾಗದ ತಂಡ ಪ್ರಶಸ್ತಿ ಗೆದ್ದಿತು. ಆದರೆ, ಕಳೆದ ಫೆಡರೇಷನ್‌ ಕಪ್‌ನಲ್ಲಿ 84 ಅಂಕ ಗಳಿಸಿ ಈ ವಿಭಾಗದಲ್ಲಿ ಚಾಂಪಿಯನ್‌ಶಿಪ್‌ ಪಡೆದಿದ್ದ ತಮಿಳುನಾಡು ತಂಡ ಈ ಬಾರಿ ಕೇವಲ 48 ಅಂಕ ಪಡೆದು ಎರಡನೇ ಸ್ಥಾನಕ್ಕಿಳಿಯಿತು.

ಕೇರಳ ತಂಡ 86 ಅಂಕಗಳೊಂದಿಗೆ ಮಹಿಳಾ ವಿಭಾಗದಲ್ಲಿ ತಂಡ ಪ್ರಶಸ್ತಿ ಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು. 68 ಅಂಕ ಗಳಿಸಿದ ಕರ್ನಾಟಕ ತಂಡ ಮಹಿಳಾ ವಿಭಾಗದ ರನ್ನರ್‌ಅಪ್‌ ಪ್ರಶಸ್ತಿಗೆ ಭಾಜನವಾಯಿತು.

By Suddi9

Leave a Reply

Your email address will not be published. Required fields are marked *