ವಾಮಂಜೂರು: ವಾಮಂಜೂರಿನ ಶ್ರಮಿಕ ಸಂತ ಜೋಸೆಫ್ ಚರ್ಚ್ನ ವಾರ್ಷಿಕ ಹಬ್ಬ ಮೇ.1 ಶುಕ್ರವಾರ ಜರಗಿತು. ರೇಫಾ ಪಾಸ್ಕಲ್ ಮಿನೇಜಸ್ ಅವರು ಪ್ರಧಾನ ಗುರುಗಳಾಗಿ ಪೂಜಾವಿಧಿ ನೆರವೇರಿಸಿದರು.
ಈ ಸಂದರ್ಭದಲ್ಲಿ ವಾಮಂಜೂರು ಚರ್ಚ್ನ ಪ್ರಧಾನ ಧರ್ಮಗುಗಳಾದ ರೇಫಾ ಸಿಪ್ರಿಯನ್ ಪಿಂಟೊ, ಸಹಾಯಕ ಧರ್ಮಗುರು ಫಾ|ಮೆಲ್ವಿನ್ ಡಿ’ಸೋಜಾ, ಅತೀ ವಂ.ಫಾ. ವಲೇರಿಯನ್ ಪಿಂಟೊ ಪ್ರಧಾನ ಧರ್ಮಗುರುಗಳು, ಕುಲಶೇಖರ ಚರ್ಚ್, ಇವರೊಂದಿಗೆ ಸ್ಥಳೀಯ ಚರ್ಚಿನ ಧರ್ಮಗುರುಗಳು ಉಪಸ್ಥಿತರಿದ್ದರು.









