ಮಂಗಳೂರು : ಮಂಗಳೂರಿನ ಹೆಮ್ಮೆಯ ಮಂಗಳಾ ಕ್ರೀಡಾಂಗಣ ಜಾಗತಿಕವಾಗಿ ಗುರುತಿಸಲಿರುವ 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಸೀನಿಯರ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಗುರುವಾರ ಸಂಜೆ ಅದ್ದೂರಿ ಚಾಲನೆ ದೊರಕಿದೆ.Procession-900

ರಾಜ್ಯದ ಸಚಿವ-ಶಾಸಕರ ಉಪಸ್ಥಿತಿಯಲ್ಲಿ, ಕ್ರೀಡಾ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಚಾಂಪಿಯನ್‌ಶಿಪ್‌ಗೆ ಚಾಲನೆ ದೊರೆಯುವ ಮೂಲಕ ಮೇ 1ರಿಂದ ಮಂಗಳಾ ಕ್ರೀಡಾಂಗಣ ರಾಷ್ಟ್ರೀಯ ಆ್ಯತ್ಲೆಟಿಕ್ಸ್‌ಗಳ ಸ್ಪರ್ಧಾಕಣವಾಗಿ ಮಾರ್ಪಾಡಾಗಿದೆ.

ಕಲೆ, ಸಂಸ್ಕೃತಿ ಬಿಂಬಿಸುವ ಪ್ರಕಾರಗಳು ಮತ್ತು ಹೊರ ರಾಜ್ಯಗಳ ಸಂಸ್ಕೃತಿ, ಜನರು ಹಾಗೂ ಬ್ಯಾಂಡ್‌ಗಳ ಮೆರವಣಿಗೆಯು ಸಂಜೆಯಿಂದಲೇ ಕ್ರೀಡಾಂಗಣದ ಒಳಭಾಗದಲ್ಲಿಯೇ ನಡೆಯಿತು.

Procession-1

ಸುಮಾರು 45 ಕಲಾತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿ, ಕ್ರೀಡಾಂಗಣಕ್ಕೆ ಸಾಂಸ್ಕೃತಿಕ ಮೆರುಗು ನೀಡಿದವು. ಕ್ರೀಡಾಪಟುಗಳ ಸಂಚಲನದ ಬಳಿಕ ಸಾಂಸ್ಕೃತಿಕ ಮೆರವಣಿಗೆ ಪ್ರಾರಂಭಗೊಂಡಿತು. 20 ತಟ್ಟಿರಾಯ, ಗರ್ನಲ್‌ (ಸುಡುಮದ್ದು ಪ್ರದರ್ಶನ, ಪಂಜಾಬ್‌ ಬ್ಯಾಂಡ್‌, ಮೂಡಬಿದಿರೆಯ ಕೊಂಬು, ಚೆಂಡೆ, ಕೊಂಚಾಡಿಯ ಚೆಂಡೆ, 20 ಕೊಡೆ, ಆಟಿ ಕಳಂಜ (ಕರುಣಾಕರ್‌ ಗುತ್ತಿಗಾರ್‌ ಸುಳ್ಯ), ಮಂಗಳೂರು ಕೊರಗರ ಡೋಲು, ಪೂಜಾ ಕುಣಿತ (ದೇವರಾಜ್‌ ಮಂಡ್ಯ), ಮೈಸೂರು ಪೊಲೀಸ್‌ ಬ್ಯಾಂಡ್‌, ತೈಯ್ಯಂ, ಕೇರಳದ ದೇವರ ವೇಷ, ನಗಾರಿ (ಮಂಜು ಮಂಡ್ಯ), ಕಲ್ಲಡ್ಕದ ಗೊಂಬೆ (ರಮೇಶ್‌ ಬಳಗ), ಮಂಗಳೂರಿನ ಪೊಲೀಸ್‌ ಬ್ಯಾಂಡ್‌, ತುಳುನಾಡ ವಾದ್ಯ (ಕೇಶವ ಮಿಜಾರು), ಜಗ್ಗಳಿಕೆ, ಹಗಲುವೇಷ, ಬೇಡರ ಕುಣಿತ, ಹುಲಿವೇಷ, ಎನ್‌.ಸಿ.ಸಿ, ಸ್ಕೌಟ್‌ ಮತ್ತು ಗೆಡ್ಸ್‌, ಸೇವಾದಳ, ಕಲ್ಲಡ್ಕ ಶಾಲೆಯ ಬ್ಯಾಂಡ್‌ ಸೆಟ್‌, ಅಳಿಕೆ ಶಾಲೆಯ ಬ್ಯಾಂಡ್‌ ಸೆಟ್‌, ರೋಟರಿ ಶಾಲೆಯ ಬ್ಯಾಂಡ್‌ ಸೆಟ್‌, ತ್ರಿವರ್ಣ ಧ್ವಜ, ಏಕಲವ್ಯ ಮಕ್ಕಳು, ಲಂಗ ದಾವಣಿ ತೊಟ್ಟ ಪ್ರೌಢ ಶಾಲಾ ಮಕ್ಕಳು, 100 ಜನರ ಶೃಂಗಾರಿ ಮೇಳ (ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜು), ಹುಡುಗಿಯರ ಡೊಳ್ಳು ಕುಣಿತ (ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜು), ಮಣಿಪುರ ಮಕ್ಕಳು, ಕೇರಳದ ವಿದ್ಯಾರ್ಥಿನಿಯರ ತಂಡ ಭಾಗವಹಿಸಿತ್ತು.

Procession-1A

ಒರಿಸ್ಸಾದ ಪ್ರಿನ್ಸ್‌ ಡ್ಯಾನ್ಸ್‌ ಗ್ರೂಪ್‌, ಮೆರವಣಿಗೆಯಲ್ಲಿ ಭಾಗವಹಿಸಿದ ತಂಡಗಳಿಂದ ಪ್ರದರ್ಶನ ಹಾಗೂ ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮಗಳು ನಡೆದವು.

Procession-2
ಇಂದಿನಿಂದ ಕ್ರೀಡಾ ಲೋಕದ ಅನಾವರಣ
ಮೇ 1ರ ಬೆಳಗ್ಗೆ 6ರಿಂದ 9.15ರ ವರೆಗೆ ಹಾಗೂ ಮಧ್ಯಾಹ್ನ 3.30ರಿಂದ 6.20ರ ವರೆಗೆ ರಾಷ್ಟ್ರೀಯ ಸೀನಿಯರ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ನಡೆಯಲಿದೆ. ಈ ಮೂಲಕ ರಾಷ್ಟ್ರೀಯ ಸ್ಪರ್ಧಿಗಳ ಕ್ರೀಡಾಕೂಟಕ್ಕೆ ಮಂಗಳೂರಿನ ಮಂಗಳಾ ಕ್ರೀಡಾಂಗಣ ಸಾಕ್ಷಿಯಾಗಲಿದೆ. ನೂರಾರು ದಾಖಲೆ, ಹಲವರ ಸಾಧನೆ ಹಾಗೂ ಪದಕ ಗೆಲ್ಲುವ ಭಾರೀ ಮಹತ್ವದ ಸನ್ನಿವೇಶಗಳಿಗೆ ಮಂಗಳಾ ಕ್ರೀಡಾಂಗಣ ಮೇ 1ರಿಂದ ವೇದಿಕೆ ಒದಗಿಸಲಿದೆ.

By suddi9

Leave a Reply

Your email address will not be published. Required fields are marked *