ಮೂಡುಬಿದರೆ: ಮಾಸ್ತಿಕಟ್ಟೆಯಲ್ಲಿ ನಡೆದ ದನ ಕಳ್ಳತನ ಮತ್ತು ಪೇಪರ್ಮಿಲ್ ಕೆಂಪ್ಲಾಜೆಜೆಯ ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಪಾತ್ರೆ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಾಡಿ ವಾರಂಟ್ ಮೇರೆಗೆ ಮೂಡುಬಿದರೆ ಪೊಲೀಸರು ತಮ್ಮ ವಶಕ್ಕೆ ಪಡಕೊಂಡಿದ್ದಾರೆ.
* ಮೂಡು ನಾಗರಾಜ್

mbd_april29_5( Nagaraj)


* ಪೊಲೀಸ್ ಪರಿಶೀಲನೆmbd_april29_5

* ಮುಹಮ್ಮದ್ ಮುಕ್ಸಿನ್mbd_april29_5( mohammed)
ಮಾಸ್ತಿಕಟ್ಟೆಯಲ್ಲಿ ಕೆಲ ತಿಂಗಳ ಹಿಂದೆ ಅಕ್ರಮ ದನ ಕಳ್ಳಸಾಗಾಟದ ವೇಳೆ ಕಾರು ಪಲ್ಟಿ ಹೊಡೆದು ಅದರಲ್ಲಿದ್ದ ಆರೋಪಿ ಉಪ್ಪಿನಂಗಡಿ ನೆಕ್ಕಿಲಾಡಿಯ ಮುಹಮ್ಮದ್ ಮುಕ್ಸಿನ್(20)ಪರಾರಿಯಾಗಿದ್ದ. ಬಳಿಕ ಈತ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ. ಈ ಬಗ್ಗೆ ಮಾಹಿತಿ ಪಡೆದ ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಆರೋಪಿಯನ್ನು ಕೋರ್ಟ್ ಅನುಮತಿಯಂತೆ ಬಾಡಿ ವಾರಂಟ್ನಲ್ಲಿ ತಮ್ಮ ವಶಕ್ಕೆ ಪಡಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಗುರುವಾರ ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.
ಕೆಂಪ್ಲಾಜೆಯ ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಈ ಹಿಂದೆ ಪಾತ್ರೆ ಕಳ್ಳತನದ ಆರೋಪಿ ಮೂಲತ ಭದ್ರಾವತಿಯ ನಾಗರಾಜ್(40)ಎಂಬಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಕಾಕ್ಳ ಗ್ರಾಮಾಂತರ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ. ಈತನನ್ನು ಕೂಡ ಮೂಡುಬಿದರೆ ಪೊಲೀಸರು ಬಾಡಿ ವಾರಂಟ್ ಮೇಲೆ ತಮ್ಮ ವಶಕ್ಕೆ ಪಡಕೊಂಡು ವಿಚಾರಣೆ ನಡೆಸಿದ್ದು ಗುರುವಾರ ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

………..

By suddi9

Leave a Reply

Your email address will not be published. Required fields are marked *